Monday, March 24, 2025
Homeಸುದ್ದಿಗಳುದೈವ ನರ್ತಕರಿಗೆ ಎರಡು ಸಾವಿರ ರೂ. ಮಾಸಾಶನ ನೀಡಲು ಸರ್ಕಾರ ನಿರ್ಧಾರ

ದೈವ ನರ್ತಕರಿಗೆ ಎರಡು ಸಾವಿರ ರೂ. ಮಾಸಾಶನ ನೀಡಲು ಸರ್ಕಾರ ನಿರ್ಧಾರ

ದೈವ ನರ್ತನ ಮಾಡುವವರಿಗೆ ಮಾಸಾಶನ ನೀಡಲು ನಿರ್ಧರಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.

60 ವರ್ಷ ಮೇಲ್ಪಟ್ಟ ದೈವನರ್ತನ ಮಾಡುವವರಿಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ಮಾಸಾಶನ ನೀಡಲು ಯೋಜನೆ ರೂಪಿಸಲಾಗಿದೆ. ಕರಾವಳಿ ಭಾಗದಲ್ಲಿ ಇರುವ ದೈವನರ್ತಕರ ಬಹುದಿನದ ಬೇಡಿಕೆ ಇದೀಗ ಈಡೇರಿದೆ. ಕಾಂತಾರ ಚಿತ್ರದ ಮೂಲಕ ತುಳುನಾಡಿನ ಹೆಮ್ಮೆಯ ಆಚರಣೆ ಭೂತ ಕೋಲ ಇದೀಗ ಜಗತ್ ಪ್ರಸಿದ್ಧಿಯಾಗಿದೆ. ದೇಶ ಮಾತ್ರವಲ್ಲದೇ ವಿದೇಶಗಳಲ್ಲೂ ಕಾಂತಾರ ಚಿತ್ರ ವೀಕ್ಷಿಸಿದ ವಿದೇಶಿಗರು ಭೂತ ಕೋಲ ಆಚರಣೆಯ ಕುರಿತ ಮಾತುಗಳನ್ನಾಡುತ್ತಿದ್ದಾರೆ. ದೈವನರ್ತಕರ ಕುಟುಂಬಕ್ಕೆ ಸರ್ಕಾರ ಆಶಾದಾಯಕ ನಿರ್ಧಾರ ತೆಗೆದುಕೊಂಡಿದ್ದು, ಇವರ ಅಭಿವೃದ್ಧಿಗೆ ಸರ್ಕಾರ ಕ್ರಮ ಕೈಗೊಂಡಿದೆ.

RELATED ARTICLES
- Advertisment -spot_img

Most Popular