ಸಕಲೇಶಪುರ : ಪುರಸಭೆಯವರು ಹೇಮಾವತಿ ನದಿ ದಡದಲ್ಲಿ, ಕಸವಿಲೇವಾರಿ ಮಾಡುತ್ತಿರುವುದನ್ನು ಕೂಡಲೆ ನಿಲ್ಲಿಸಬೇಕೆಂದು ಯುವ ಕಾಂಗ್ರಸ್ ಅಧ್ಯಕ್ಷ ನದೀಮ್ ಆಗ್ರಹಿಸಿದ್ದಾರೆ.
ಕಳೆದ ಹಲವು ತಿಂಗಳಿನಿಂದ ಪಟ್ಟಣದ ಹೇಮಾವತಿ ನದಿ ದಡದಲ್ಲಿ ಪುರಸಭೆ ಕಸವಿಲೇವಾರಿ ಮಾಡುತ್ತಿದ್ದು, ಇದರಿಂದ ಹೇಮಾವತಿ ಮಲೀನವಾಗುತ್ತಿದೆ ಮತ್ತು ಸುತ್ತಮುತ್ತಲ ನಿವಾಸಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದರು.
ಇಲ್ಲಿನ ತ್ಯಾಜ್ಯದಿಂದ ಕೊಳೆತು ಹರಿಯುವ ನೀರು ಹೇಮಾವತಿ ನದಿಗೆ ಸೇರಿ, ಕುಡಿಯುವ ನೀರು ಕೂಡ ಮಲಿನಗೊಳ್ಳುತ್ತಿದೆ. ಇದೇ ನೀರನ್ನು ಕುಡಿಯುವ ದುರ್ಘತಿ ಜನತೆಗೆ ಬಂದೊದಗಿದೆ. ಪಟ್ಟಣದ ಜನರನ್ನು ಇಂತಹ ದುಸ್ಥಿಗೆ ತಳ್ಳಿರುವ ಪುರಸಭೆ ಕೂಡಲೇ ಇಲ್ಲಿ ಕಸ ವಿಲೇವಾರಿ ಮಾಡುವುದನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.