Tuesday, March 25, 2025
Homeಸುದ್ದಿಗಳುಜಿಂಕೆಗೆ ಕಚ್ಚಿದ ಬೀದಿ ನಾಯಿಗಳು : ಚಿಂತಾ ಜನಕ ಸ್ಥಿತಿಯಲ್ಲಿ ಜಿಂಕೆ ಅರಣ್ಯ ಇಲಾಖೆಗೆ ಮಾಹಿತಿ...

ಜಿಂಕೆಗೆ ಕಚ್ಚಿದ ಬೀದಿ ನಾಯಿಗಳು : ಚಿಂತಾ ಜನಕ ಸ್ಥಿತಿಯಲ್ಲಿ ಜಿಂಕೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ

  • ಸಕಲೇಶಪುರ:ತಾಲೂಕಿನ ಬಾಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಾಗೆ ಗ್ರಾಮದಲ್ಲಿ ಬೀದಿ ನಾಯಿ ಹಾವಳಿಗೆ ಜಿಂಕೆ ಒಂದು ಗಾಯಗೊಂಡಿರುವ ಘಟನೆ ನಡೆದಿದೆ.
  • ಬೀದಿ ನಾಯಿಗಳು ಜಿಂಕೆಯ ತೊಡೆ ಬಾಗಕ್ಕೆ ಕಚ್ಚಿರುವ ಹಿನ್ನೆಲೆಯಲ್ಲಿ ಜಿಂಕೆಯು ತೀವ್ರ ಗಾಯದಿಂದ ಬಳಲುತ್ತಿದೆ. ತಕ್ಷಣವೇ ಗ್ರಾಮಸ್ಥರು ಅರಣ್ಯ ಇಲಾಖೆಗೆ ವಿಷಯವನ್ನು ಮುಟ್ಟಿಸಿದರು ಸಹ ಅರಣ್ಯ ಇಲಾಖೆ ಸಿಬ್ಬಂದಿಗಳು ಸುಮಾರು ಎರಡು ತಾಸುವಾದರೂ ಸ್ಥಳಕ್ಕೆ ಬಾರದೆ ಇರುವುದರಿಂದ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
  • ಒಂದು ವೇಳೆ ಜಿಂಕೆ ಏನಾದ್ರು ಸಾವನ್ನಪ್ಪಿದರೆ ಅದಕ್ಕೆ ಅರಣ್ಯ ಇಲಾಖೆಗಳ ನಿರ್ಲಕ್ಷವೇ ಕಾರಣ ಎಂದು ಹೇಳಿದ್ದಾರೆ
  • ಈ ಸಂಬಂಧ ಬಾಗೆ ಗ್ರಾಮ ಪಂಚಾಯಿತಿ ಸದಸ್ಯ ಚಾರ್ಲ್ಸ್ ಮಾತನಾಡಿ ಜಿಂಕೆಗೆ ಗಾಯವಾದ ತಕ್ಷಣ ಗ್ರಾಮಸ್ಥರು ಪ್ರಥಮ ಚಿಕಿತ್ಸೆ ನೀಡಿ ಆರೈಕೆ ಮಾಡಿದ್ದಾರೆ. ಆದರೆ ಅರಣ್ಯ ಇಲಾಖೆಯವರು ತಮ್ಮ ನಿರ್ಲಕ್ಷತನದ ಪರಮಾವಧಿ ಪ್ರದರ್ಶನ ಮಾಡುತ್ತಿರುವುದರಿಂದ ಜಿಂಕೆ ಸಾವನ್ನಪ್ಪುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ
RELATED ARTICLES
- Advertisment -spot_img

Most Popular