Friday, March 21, 2025
Homeಕ್ರೈಮ್ಹೆರಿಗೆ ಬಂದಿದ್ದ ಮಹಿಳೆ ಸಾವು :ಬದುಕುಳಿದ ಮಗು : ಆಸ್ಪತ್ರೆ ಬಳಿ ಸಂಬಂಧಿಕರ ಆಕ್ರೋಶ: ಸ್ಥಳದಲ್ಲಿ...

ಹೆರಿಗೆ ಬಂದಿದ್ದ ಮಹಿಳೆ ಸಾವು :ಬದುಕುಳಿದ ಮಗು : ಆಸ್ಪತ್ರೆ ಬಳಿ ಸಂಬಂಧಿಕರ ಆಕ್ರೋಶ: ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣ. 

ಹೆರಿಗೆ ಬಂದಿದ್ದ ಮಹಿಳೆ ಸಾವು :ಬದುಕುಳಿದ ಮಗು : ಆಸ್ಪತ್ರೆ ಬಳಿ ಸಂಬಂಧಿಕರ ಆಕ್ರೋಶ: ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣ. 

ಸಕಲೇಶಪುರ :ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಗೆ ಹೆರಿಗೆಗೆಂದು ಬಂದಿದ್ದ ಯುವತಿಯೊರ್ವಳು ಮೃತ ಪಟ್ಟಿದ್ದರಿಂದ ಆಸ್ಪತ್ರೆ ಆವರಣದಲ್ಲಿ ಪ್ರಕ್ಷುಬ್ದ ವಾತವರಣ ಮೂಡಿದ್ದು ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

 ಪಟ್ಟಣದ ಕುಶಾಲನಗರ ಬಡಾವಣೆಯ ನಿವಾಸಿ ಆದಿಲ್ ಪಾಷಾ ಎಂಬುವರ ಪತ್ನಿ ತಬ್ಬಸುಮ್ (26)ಎಂಬುವರಿಗೆ ಹೆರಿಗೆಗಾಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು ಹೆಣ್ಣು ಮಗುವಿಗೆ ಜನುಮ ನೀಡಿದ್ದಾರೆ. ಈ ಸಂದರ್ಭದಲ್ಲಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ ಯುವತಿಯನ್ನು ಆಂಬುಲೆನ್ಸ್ ಮುಖಾಂತರ ಹಾಸನದ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಮೃತ ಪಟ್ಟಿದ್ದು ಮಗು ಬದುಕಿದೆ. ವೈದ್ಯರ ನಿರ್ಲಕ್ಷದಿಂದ ಯುವತಿ ಮೃತಪಟ್ಟಿದ್ದು ಮೃತ ಯುವತಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಯುವತಿಯ ಸಾವಿಗೆ ಕಾರಣರಾದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಆಸ್ಪತ್ರೆ ಆವರಣಕ್ಕೆ ಯುವತಿಯ ಸಂಬಂಧಿಕರು ಆಗಮಿಸಿ ಗುಂಪು ಗೂಡಿದ್ದರಿಂದ ಆಸ್ಪತ್ರೆ ಆವರಣದಲ್ಲಿ ಪ್ರಕ್ಷುಬ್ದ ವಾತವರಣ ಉಂಟಾಗಿದೆ.

ಭಾರಿ ಸಂಖ್ಯೆಯಲ್ಲಿ ಪೋಲೀಸರ ನಿಯೋಜನೆ : ಘಟನೆ ನಡೆಯುತ್ತಿದ್ದಂತೆ ಮಹಿಳೆಯ ಸಂಬಂಧಿಕರು ಆಸ್ಪತ್ರೆ ಬಳಿ ಜಮಾಯಿಸುತ್ತಿದ್ದಂತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಮುಂಜಾಗ್ರತ ಕ್ರಮವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪರಿಸ್ಥಿತಿಯನ್ನು ನಿಭಾಯಿಸಲು ಪೊಲೀಸ್ ಹಿರಿಯ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ಸ್ಥಳದಲ್ಲಿ ನಿಯೋಜಿಸಿದ್ದಾರೆ.

RELATED ARTICLES
- Advertisment -spot_img

Most Popular