Sunday, March 16, 2025
Homeಸುದ್ದಿಗಳುಸಕಲೇಶಪುರಕಾಫಿ ಕೃಷಿ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ

ಕಾಫಿ ಕೃಷಿ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ

ಸಕಲೇಶಪುರ: ಕಾರ್ಮಿಕ ಕಲ್ಯಾಣ ಕಾರ್ಯಕ್ರಮಗಳ ಯೋಜನೆಯಲ್ಲಿ ಕಾಫಿ ಮಂಡಳಿ ಪರಿಶಿಷ್ಟ ಜಾತಿ ಮತ್ತು ಪಂಗಡದ 5 ಎಕರೆ ಒಳಗಿನ ಸಣ್ಣ ಕಾಫಿ ಬೆಳೆಗಾರರ ಹಾಗೂ ಕಾಫಿ ಕೃಷಿ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಿದ್ಯಾರ್ಥಿ ವೇತನಕ್ಕೆ ಅರ್ಜಿಗಳನ್ನು ಆಹ್ವಾನ ಮಾಡಿದೆ.

ನಿಬಂಧನೆಗಳು

1. 2021-22 ರಲ್ಲಿ 10 ನೇ ತರಗತಿ ಉತ್ತೀರ್ಣ ಹೊಂದಿ ಪ್ರಸಕ್ತ ಸಾಲಿನಲ್ಲಿ ಪ್ರಥಮ ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳು.

2. 2021-22 ರಲ್ಲಿ ಪಿಯುಸಿ ಉತ್ತೀರ್ಣ ಹೊಂದಿ ಪ್ರಸಕ್ತ 2022-23 ರಲ್ಲಿ ಯಾವುದೇ ಪದವಿ ಪ್ರವೇಶ ಹೊಂದಿರುವ ವಿದ್ಯಾರ್ಥಿಗಳು.

3. ಅನುದಾನದ ಲಭ್ಯತೆ ಹಾಗೂ ಮೆರಿಟ್ ಆಧಾರದಲ್ಲಿ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಗುವುದು

4. ಮೊದಲು ಬಂದವರಿಗೆ ಮೊದಲ ಆಧ್ಯತೆ

5. ಅರ್ಜಿ ಸಲ್ಲಿಸಲು ತಾತ್ಕಾಲಿಕ ಕೊನೆಯ ದಿನಾಂಕ 15.1.2023.

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕಾಫಿ ಮಂಡಳಿ ಕಛೇರಿಯನ್ನು ಸಂಪರ್ಕಿಸುವುದು.

ಕಿರಿಯ ಸಂಪರ್ಕಾಧಿಕಾರಿಗಳು, ಕಾಫಿ ಮಂಡಳಿ, ಯಸಳೂರು, ಸಕಲೇಶಪುರ
9481178816

RELATED ARTICLES
- Advertisment -spot_img

Most Popular