Tuesday, March 25, 2025
Homeಸುದ್ದಿಗಳುಸಕಲೇಶಪುರನಿಲ್ಲಿಸಿದ ಕಾರಿನ ಮೇಲೆ ಬಿದ್ದ ಮರ 

ನಿಲ್ಲಿಸಿದ ಕಾರಿನ ಮೇಲೆ ಬಿದ್ದ ಮರ 

ನಿಲ್ಲಿಸಿದ ಕಾರಿನ ಮೇಲೆ ಬಿದ್ದ ಮರ 

ಸಕಲೇಶಪುರ : ಪಟ್ಟಣದ ಅರಣ್ಯ ಇಲಾಖೆ ಮುಂಭಾಗವಿರುವ ವಸತಿ ಪ್ರದೇಶದಲ್ಲಿ  ನಿಲ್ಲಿಸಿದ್ದ ಕಾರಿನ ಮೇಲೆ ತಡರಾತ್ರಿ  ಮರ ಒಂದು ಬಿದ್ದು ಕಾರು ಸಂಪೂರ್ಣ ಜಖಂ ಗೊಂಡಿರುವ ಘಟನೆ ನಡೆದಿದೆ.

ಕಾರಿನಲ್ಲಿ ಯಾರೂ ಇಲ್ಲದೆ ಇರುವುದರಿಂದ  ಸಂಭಾವ್ಯ ಅಪಾಯ ತಪ್ಪಿದೆ. ಅಂಬಾಸಿಡರ್  ಕಾರಿನ ಮಾಲೀಕ ಯಶ್ವಂತ್ ಎಂದು ತಿಳಿದು ಬಂದಿದ್ದು. ತಮ್ಮ ಮನೆಯ ಸಮೀಪವೇ  ಪ್ರತಿನಿತ್ಯ ಕಾರನ್ನು ನಿಲ್ಲಿಸಿ ಹೋಗುತ್ತಿದ್ದರು. ಅರಣ್ಯ ಹಾಗೂ ರೈಲ್ವೆ ಇಲಾಖೆಯ ಆಜುಬಾಜಿನಲ್ಲಿ  ಬೃಹತ್ ಮರಗಳಿದ್ದು ಕಳೆದ ರಾತ್ರಿ 1:30ರ ಸಮಯದಲ್ಲಿ ಕಾರಿನ ಮೇಲೆ ಮರ ಬಿದ್ದಿದೆ. ಹಲವು ದಿನಗಳಿಂದ ಸ್ಥಳೀಯರು  ಅಪಾಯದಲ್ಲಿರುವ ಮರಗಳನ್ನು ತೆರವುಗೊಳಿಸುವಂತೆ ಮನವಿ ಮಾಡಿದ್ದರು  ಸಹ  ರೈಲ್ವೆ ಇಲಾಖೆಯ  ನಿರ್ಲಕ್ಷತನದಿಂದ  ಮರ ಕಾರಿನ ಮೇಲೆ ಬಿದ್ದಿದ್ದು  ಸೂಕ್ತ ಪರಿಹಾರಕ್ಕಾಗಿ ಮಾಲೀಕರು ರೈಲ್ವೆ ಇಲಾಖೆಗೆ ಒತ್ತಾಯಿಸಿದ್ದಾರೆ. ಈಗಾಗಲೇ ಅಂಬಾಸಿಡರ್ ಕಾರಿಗೆ ಸಾಕಷ್ಟು  ಖರ್ಚು ಮಾಡಿ ಸುಸ್ಥಿತಿಯಲ್ಲಿ ಇಟ್ಟುಕೊಂಡಿದ್ದ ಮಾಲೀಕರು ಇದೀಗ ಮರ ಬಿದ್ದ ಪರಿಣಾಮ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದೆ. ಮರ ಬಿದ್ದ ರಭಸಕ್ಕೆ ಹಲವು  ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು ಯಾವುದೇ ಅಪಾಯ ಸಂಭವಿಸಿಲ್ಲ.ದಿನವಿಡಿ ಈ ಬಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.

RELATED ARTICLES
- Advertisment -spot_img

Most Popular