ಹಲವಾರು ವರ್ಷಗಳಿಂದ ಸಕಲೇಶಪುರ ಭಾಗದಲ್ಲಿ ಬೀಡು ಬಿಟ್ಟಿದ್ದ ತಣ್ಣೀರು ಕಾಡಾನೆ. ಕಾಡಾನೆ ಸೆರೆಹಿಡಿದ ನಂತರಅರಣ್ಯಕ್ಕೆ ಬಿಡಲಾಗಿತ್ತು.
ನೆನ್ನೆ ಕೇರಳದ ಮಾನಂದವಾಡಿ ಪಟ್ಟಣದ ಜನನಿಬಿಡ ಪ್ರದೇಶಕ್ಕೆ ನುಗ್ಗಿದ್ದ ಕಾಡಾನೆ
ಕೇರಳದ ವಯನಾಡು ವ್ಯಾಪ್ತಿಯ ಮಾನಂದವಾಡಿ ಗ್ರಾಮ ಎಂಟ್ರಿ ನೀಡಿದ್ದ ಕಾಡಾನೆ.ಹಾಸನದ ಬೇಲೂರಿನಲ್ಲಿ ಸೆರೆ ಹಿಡಿದು ರೇಡಿಯೋ ಕಾಲರ್ ಅಳವಡಿಸಿ ಬಂಡೀಪುರಕ್ಕೆ ಅರಣ್ಯಕ್ಕೆ ಬಿಡಲಾಗಿದ್ದ ಆನೆ.
ಗಡಿ ದಾಟಿ ಕೇರಳದ ಮಾನಂದವಾಡಿ ಪಟ್ಟಣಕ್ಕೆ ನುಗ್ಗಿದ್ದ ಆನೆ.ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆನೆಗೆ ಡಾಟಿಂಗ್ ಮಾಡಿ ಸೆರೆ ಹಿಡಿದಿದ್ದ ಕೇರಳದ ಅರಣ್ಯ ಸಿಬ್ಬಂದಿ.ಬಂಡೀಪುರದ ರಾಮಾಪುರ ಆನೆ ಶಿಬಿರಕ್ಕೆ ಲಾರಿಯಲ್ಲಿ ಕರೆತಂದಿದ್ದ ಕೇರಳದ ಅರಣ್ಯ ಸಿಬ್ಬಂದಿ.
ನಿನ್ನೆ ರಾತ್ರಿ ಲಾರಿ ನಿಲ್ಲಿಸುತ್ತಿದ್ದಂತೆ ಕುಸಿದು ಬಿದ್ದು ಆನೆ ಸಾವು ಎಂದು ಅರಣ್ಯ ಇಲಾಖೆ ಮಾಹಿತಿ.ತಣ್ಣೀರ್ ಕೊಂಬನ್ ಎಂದು ಕರೆಯಲ್ಪಡುತ್ತಿದ್ದ ಆನೆ.ಇಂದು ಕಾಡಾನೆಯ ಮರಣೋತ್ತರ ಪರೀಕ್ಷೆ.
ಪರೀಕ್ಷೆ ಬಳಿಕ ಆನೆ ಸಾವಿಗೆ ನಿಖರ ಕಾರಣ ಬಹಿರಂಗ.ಅರಣ್ಯ ಇಲಾಖೆ ಅಧಿಕಾರಿಗಳ ಮಾಹಿತಿ.ಈ ಹಿಂದೆ ಕೂಡ ಅಕ್ಕಿ ರಾಜ ಎಂಬ ಕಾಡಾನೆ ಸತ್ತಿತ್ತು.ಹೃದಯ ಸ್ತಂಭನದಿಂದ ಕಾಡಾನೆ ಸತ್ತಿದೆಂಬ ವರದಿ ಬಂದಿತ್ತು.
ಸಕಲೇಶಪುರ ತಾಲೂಕಿನ ಹಲವು ಭಾಗಗಳಲ್ಲಿ ಸುತ್ತಾಡುತ್ತಿದ್ದ ಈ ಕಾಡಾನೆ ಸೌಮ್ಯ ಸ್ವಭಾವದಾಗಿತ್ತು. ಜನವಸತಿ ಪ್ರದೇಶಗಳಲ್ಲಿ ಓಡಾಡುತ್ತಿದ್ದರು ಯಾರಿಗೂ ತೊಂದರೆ ಮಾಡಿರಲಿಲ್ಲ. ಈ ಕಾಡಾನೆಯನ್ನು ಸೆರೆ ಹಿಡಿಯುವ ವೇಳೆ ಸಾರ್ವಜನಿಕರಿಂದಲೂ ಕೂಡ ಆಕ್ಷೇಪಣೆ ವ್ಯಕ್ತವಾಗಿತ್ತು. ಮೃದು ಸ್ವಭಾವದ ಆನೆಯನ್ನು ಸೆರೆ ಹಿಡಿಯುವ ಬದಲು ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಸೆರೆ ಹಿಡಿಯುವಂತೆ ಸಾರ್ವಜನಿಕರು ಆಗ್ರಹಿಸಿದ್ದರು.