Saturday, January 24, 2026
Homeಸುದ್ದಿಗಳುಸಕಲೇಶಪುರಅರ್ಜುನ ಸಮಾಧಿ ನಿರ್ಮಾಣಕ್ಕೆ ಯಾರು ಸಹ ಹಣ ಸಂಗ್ರಹ ಮಾಡುವುದು ಬೇಡ: ಶಾಸಕ ಸಿಮೆಂಟ್ ಮಂಜು

ಅರ್ಜುನ ಸಮಾಧಿ ನಿರ್ಮಾಣಕ್ಕೆ ಯಾರು ಸಹ ಹಣ ಸಂಗ್ರಹ ಮಾಡುವುದು ಬೇಡ: ಶಾಸಕ ಸಿಮೆಂಟ್ ಮಂಜು

ಅರ್ಜುನ ಸಮಾಧಿ ನಿರ್ಮಾಣಕ್ಕೆ ಯಾರು ಸಹ ಹಣ ಸಂಗ್ರಹ ಮಾಡುವುದು ಬೇಡ: ಶಾಸಕ ಸಿಮೆಂಟ್ ಮಂಜು

ಸಕಲೇಶಪುರ: ಅರ್ಜುನನ ಸಮಾಧಿ ನಿರ್ಮಾಣಕ್ಕೆ ಸರ್ಕಾರ ಹಣ ಬಿಡುಗಡೆ ಮಾಡುವ ವಿಶ್ವಾಸವಿದೆ, ಸಮಾಧಿ ನಿರ್ಮಾಣದ ಹೆಸರಿನಲ್ಲಿ ಹಣ ಸಂಗ್ರಹ ಮಾಡುವುದು ಬೇಡ ಎಂದು  ಶಾಸಕ ಸಿಮೆಂಟ್ ಮಂಜು ಹೇಳಿದ್ದಾರೆ.

. ಅರ್ಜುನನ ಸಮಾಧಿ ವಿವಾದದ ಕುರಿತು ಪ್ರತಿಕ್ರಿಯಿಸಿರುವ ಶಾಸಕರು ಅರ್ಜುನನ ಸಮಾಧಿ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಅರ್ಜುನನ ಸಮಾಧಿ ರಕ್ಷಿತಾ ಅರಣ್ಯದಲ್ಲಿ ಇರುವುದರಿಂದ ಏಕಾಏಕಿ ಸಮಾಧಿ ನಿರ್ಮಾಣ ಮಾಡಲು ಅವಕಾಶವಿರುವುದಿಲ್ಲ. ಅರಣ್ಯ ಇಲಾಖೆಯ ಅನುಮತಿ ದೊರಕಿದ ನಂತರ ಸರ್ಕಾರ ಹಣ ಬಿಡುಗಡೆ ಮಾಡಬೇಕು, ಅರ್ಜುನನ ಅಭಿಮಾನಿಗಳು ಅಲ್ಲಿಯವರೆಗೆ ತಾಳ್ಮೆಯಿಂದ ಇರಬೇಕು. ಅರ್ಜುನನ ಸಮಾಧಿ ಹೆಸರಿನಲ್ಲಿ ಖಾಸಗಿ ವ್ಯಕ್ತಿಗಳು ಹಣ ಸಂಗ್ರಹ ಮಾಡುವುದು ಸರಿಯಲ್ಲ,ಒಂದು ವೇಳೆ ಸರ್ಕಾರ ಹಣ ಬಿಡುಗಡೆ ಮಾಡದಿದ್ದಲ್ಲಿ ನನ್ನ ಅನುದಾನವನ್ನು ಸಮಾಧಿ ನಿರ್ಮಾಣಕ್ಕೆ ನೀಡುತ್ತೇನೆ ಎಂದಿದ್ದಾರೆ

RELATED ARTICLES
- Advertisment -spot_img

Most Popular