ಹಾಸನ ಜಿಲ್ಲಾಧಿಕಾರಿಯ ದಿಕ್ಕು ತಪ್ಪಿಸಿದ ರೈಲು ವಿಪತ್ತು ಅಣುಕು ಪ್ರದರ್ಶನ
ಸಕಲೇಶಪುರ : ಶನಿವಾರ ನಡೆಯಲಿರುವ ಕಲ್ಪಿತ ಕಾರ್ಯಚರಣೆ ವಿಚಾರವನ್ನು ರೈಲ್ವೆ ಇಲಾಖೆ ಜಿಲ್ಲಾಧಿಕಾರಿಗೆ ಮುಂಚಿತವಾಗೆ ತಿಳಿಸಿದ್ದು ಕಲ್ಪಿತ ಕಾರ್ಯಚರಣೆಯ ನ್ಯೊಡಲ್ ಅಧಿಕಾರಿಯನ್ನಾಗಿ ಸಕಲೇಶಪುರ ಉಪವಿಭಾಗಾಧಿಕಾರಿ ಡಾ.ಎಂ.ಕೆ ಶೃತಿ ಅವರನ್ನು ಜಿಲ್ಲಾಧಿಕಾರಿಯೆ ನೇಮಿಸಿದ್ದರು. ಶನಿವಾರ ಕಾರ್ಯಚರಣೆಗೂ ಮುನ್ನ ಕಾರ್ಯಚರಣೆಯ ನಿಯಮದಂತೆ ರೈಲ್ವೆ ಅಧಿಕಾರಿ, ಜಿಲ್ಲಾಧಿಕಾರಿಗೆ ಕರೆಮಾಡಿ ಸಕಲೇಶಪುರ ತಾಲೂಕಿನ ದೋಣಿಗಾಲ್ ಗ್ರಾಮ ಸಮೀಪ ರೈಲು ಅಪಘಾತವಾಗಿ ಎರಡು ಭೋಗಿಗಳು ನೆಲಕ್ಕುರುಳಿದ್ದು 10 ಜನರು ಮೃತಪಟ್ಟಿದ್ದಾರೆಂಬ ಮಾಹಿತಿ ನೀಡಿದ್ದರು. ಆದರೆ, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ಸ್ಥಳಕ್ಕೆ ದೌಡಾಯಿಸುವಂತೆ ಸಕಲೇಶಪುರ ಉಪವಿಭಾಗಾಧಿಕಾರಿ,ತಹಸೀಲ್ದಾರ್,ಡಿವೈಎಸ್‌ಪಿ ಗೆ ಸೂಚನೆ ನೀಡಿದ್ದು, ಜಿಲ್ಲೆಯಿಂದ ಹೆಚ್ಚಿನ ಅಂಬುಲೆನ್ಸ್ಗಳು ತೆರಳುವಂತೆ ನಿರ್ದೇಶನ ನೀಡಿದ್ದರು. ಜಿಲ್ಲಾಧಿಕಾರಿಯ ನಿರ್ದೇಶನದ ಮೇರೆಗೆ ಸ್ಥಳಕ್ಕೆ ತಾರತುರಿಯಲ್ಲಿ ಆಗಮಿಸಿದ್ದ ತಾಲೂಕಿನ ಹಿರಿಯ ಮೂವರು ಅಧಿಕಾರಿಗಳು ಇದು ಕಲ್ಪಿತ ಕಾರ್ಯಚರಣೆ ಎಂಬುದನ್ನು ಖಾತ್ರಿಪಡಿಸಿಕೊಂಡರೆ, ಹಾಸನದಿಂದ ಹೊರಟ್ಟಿದ್ದ ಸಾಕಷ್ಟು ಅಂಬುಲೆನ್ಸ್ಗಳು ವಿಚಾರ ತಿಳಿದು ಅರ್ಧದಾರಿಯಿಂದ ವಾಪಸ್ಸಾದವು. ಆದರೆ, ಇದ್ಯಾವುದರ ಪರಿವಿಲ್ಲದಂತೆ ದೌಡಾಯಿಸಿ ಬಂದ ಜಿಲ್ಲಾಧಿಕಾರಿ, ತಮ್ಮ ಸಹೋದ್ಯೋಗಿಗಳ ಬಳಿ ಕಳೆದ ಎರಡು ದಿನಗಳ ಹಿಂದೆ ನಾಲ್ಕು ಮಕ್ಕಳು ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದು ವಾರ ತುಂಭವ ಮೊದಲೆ ಇಂತಹ ದುರ್ಘಟನೆ ಮತ್ತೆ ಸಂಭವಿಸಿತ್ತಲ್ಲ ಎನ್ನುವ ಮೂಲಕ ಪಟ್ಟಣಕ್ಕೆ ಬಂದರು ಕಲ್ಪಿತ ಕಾರ್ಯಚರಣೆ ಎಂಬುದು ಅರಿಯದೆ ನಗೆಪಾಟಲಿಗೆ ಗುರಿಯಾದರು.ಈ ವೇಳೆ ಉಪವಿಭಾಗಾಧಿಕಾರಿ ಶ್ರುತಿ, ತಹಸೀಲ್ದಾರ್ ಮೇಘನಾ, ಡಿ. ವೈ. ಎಸ್. ಪಿ ಪ್ರಮೋದ್ ಕುಮಾರ್ ರವರು ಉಪಸ್ಥಿತರಿದ್ದರು.