ಹುರುಡಿ ವಿಕ್ರಂ ರವರ ಮೊಬೈಲ್ ವಶಕ್ಕೆ ಪಡೆದ ಅರಣ್ಯ ಇಲಾಖೆ.
ಸಕಲೇಶಪುರ : ಪರಿಸರವಾದಿ ಹುರುಡಿ ವಿಕ್ರಂ ರವರ ಮೊಬೈಲ್ ನ್ನು ಅರಣ್ಯ ಇಲಾಖೆ ವಶ ಪಡಿಸಿಕೊಂಡಿರುವ ಘಟನೆ ನೆಡೆದಿದೆ.
ಇಂದು ತಾಲೂಕಿನ ಹೆತ್ತೂರು ಹೋಬಳಿ ನಿಡಿಗೆರೆ ಬಳಿ ಕಾಡಾನೆ ಕಾರ್ಯಾಚರಣೆ ವೇಳೆ ವಿಡಿಯೋ ಚಿತ್ರೀಕರಣ ನೆಡಿಸುತ್ತಿದ್ದ ವೇಳೆ ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಸೀಗೆ ಎಂಬ ಕಾಡಾನೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿದ್ಧತೆ ನೆಡೆಸಿತ್ತು ಈ ವೇಳೆ ವೈದ್ಯರು ಕಾಡಾನೆಗೆ ಅರವಳಿಕೆ ನೀಡಿ ನಂತರ ಕಾಡಾನೆ ನೆಲಕ್ಕೇರುಳಿದ್ದ ವೇಳೆ ಕಾಡಾನೆಯ ಚಿತ್ರೀಕರಣದಲ್ಲಿ ತೊಡಗಿದ್ದ ವೇಳೆ ಅರಣ್ಯ ಇಲಾಖೆ ವಿಕ್ರಂ ರವರ ಮೊಬೈಲ್ ವಶಕ್ಕೆ ಪಡೆದಿದ್ದು ಮುಂದೆ ಯಾವ ರೀತಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅರಣ್ಯ ಇಲಾಖೆ ಚಿಂತನೆ ನೆಡೆಸಿದೆ ಎಂದು ತಿಳಿದುಬಂದಿದೆ.