Tuesday, March 25, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ ಹಿಂದೂ ಮುಖಂಡರ ಗಡಿಪಾರಿಗೆ ಬಿಜೆಪಿ ಮುಖಂಡ ಲೋಹಿತ್ ಕೌಡಳ್ಳಿ ಆಕ್ರೋಶ

ಸಕಲೇಶಪುರ ಹಿಂದೂ ಮುಖಂಡರ ಗಡಿಪಾರಿಗೆ ಬಿಜೆಪಿ ಮುಖಂಡ ಲೋಹಿತ್ ಕೌಡಳ್ಳಿ ಆಕ್ರೋಶ

ಸಕಲೇಶಪುರ :ಚುನಾವಣೆ ನೆಪದಲ್ಲಿ ಹಿಂದೂ ಪರ ಸಂಘಟನೆಗಳ ಮುಖಂಡರನ್ನು ಗಡಿಪಾರು ಮಾಡಿರುವುದಕ್ಕೆ ಬಿಜೆಪಿ ಮುಖಂಡ ಲೋಹಿತ್ ಕೌಡಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ವಾಸ್ತವ ನ್ಯೂಸ್ ಗೆ ಹೇಳಿಕೆ ನೀಡಿದ ಅವರು,ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲಿನ ಬೀತಿಯಿಂದ ಹಿಂದೂ ಸಂಘಟನಾಕರರನ್ನು ಗಡಿಪಾರು ಮಾಡುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ.ಇದಕ್ಕೆ ಸಮಸ್ತ ಹಿಂದೂ ಸಮಾಜ ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಉತ್ತರ ನೀಡಿಲಿದ್ದಾರೆ.

ಲೋಕಸಭಾ ಚುನಾವಣೆಯ ವೇಳೆ ಹಿಂದೂ ಕಾರ್ಯಕರ್ತರನ್ನ ಗಡಿಪಾರು ಮಾಡುವುದರಿಂದ ನಿಮ್ಮ ಸೋಲಿನ ಅಂತರ ಇನ್ನೂ ಹೆಚ್ಚಾಗುತ್ತದೆ ವಿನಹ ನಿಮಗೆ ಯಾವುದೇ ಲಾಭವಾಗುವುದಿಲ್ಲ ಎಂದು ಕಿಡಿ ಕಾರಿದರು  ಹಿಂದೂ ಸಮಾಜದ ಪರವಾಗಿ ಭಾಷಣ ಮಾಡಿದವರನ್ನು ಗಡಿ ಪಾರು ಮಾಡುವುದಾದರೆ, ತಲವಾರ್ ಹಿಡಿದು ರಸ್ತೆಯಲ್ಲಿ ಓಡಾಡುವ ದುಷ್ಕರ್ಮಿಗಳು ನಿಮ್ಮ ಕಣ್ಣಿಗೆ ಕಾಣುವುದಿಲ್ಲವೇ……?

ಗೋಮಾತೆ ರಕ್ಷಿಸುವ ರಘು ಸಕಲೇಶಪುರ, ಶಿವು ಎಂಬ ನೂರಾರು ಹಿಂದೂ ಕಾರ್ಯಕರ್ತರುನ್ನು ಗಡಿಪಾರು ಮಾಡಿದರೆ ಹಿಂದುಗಳನ್ನು ನೀವೇ ಬಡಿದೇಚ್ಚರಿಸಿದಂತೆ ಆಗುತ್ತದೆ, ಕೇವಲ ನೀವು ಗಡಿಪಾರು ಮಾಡಬಹುದು, ಆದರೆ ಹಿಂದೂಗಳ ಹೃದಯದಿಂದ ತೆಗೆದು ಹಾಕಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದ ಓಲೈಕೆ ರಾಜಾಕಾರಣ ನಿಲ್ಲಿಸದಿದ್ದರೆ ಮುಂದಿನ ಚುನಾವಣೆಗಳಲ್ಲಿ ನಿಮಗೆ ಸಾರ್ವಜನಿಕರು ಉತ್ತರ ಕೊಡಲಿದ್ದಾರೆ ಎಚ್ಚರಿಕೆ ನೀಡಿದರು.ಸಿದ್ದರಾಮಯ್ಯ ನವರ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ. ಅಭಿವೃದ್ಧಿ ಕಾರ್ಯದಲ್ಲಿ ಕುಂಟಿತವಾಗಿದೆ ಎಂದರು ಸರ್ಕಾರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

RELATED ARTICLES
- Advertisment -spot_img

Most Popular