Thursday, November 21, 2024
Homeಸುದ್ದಿಗಳುಸಕಲೇಶಪುರಸಕಲೇಶಪುರ : ಪ್ರವಾದಿಯ ಆದರ್ಶ, ತತ್ವಗಳ ಅಧ್ಯಯನ ನಡೆಸಿ, ಜೀವನದಲ್ಲಿ ಅಳವಡಿಸಿಕೊಳ್ಳಿ ; ಸಿರಾಜುದ್ದೀನ್...

ಸಕಲೇಶಪುರ : ಪ್ರವಾದಿಯ ಆದರ್ಶ, ತತ್ವಗಳ ಅಧ್ಯಯನ ನಡೆಸಿ, ಜೀವನದಲ್ಲಿ ಅಳವಡಿಸಿಕೊಳ್ಳಿ ; ಸಿರಾಜುದ್ದೀನ್ ಖಾಸ್ಮಿ

ಸಕಲೇಶಪುರ : ಪ್ರವಾದಿ ಮಹಮ್ಮದರ ಅದರ್ಶಗಳನ್ನು ಅರ್ಥೈಸಿ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸ್ವಾಸ್ಥ್ಯ ಸಮಾಜ ಮತ್ತು ಜೀವನ ಮುನ್ನಡೆಸಲು ಸಾದ್ಯವೆಂದು ಖ್ಯಾತ ಅಂತರಾಷ್ಟ್ರೀಯ ವಾಗ್ಮಿ ಸಿರಾಜುದ್ದೀನ್ ಖಾಸ್ಮಿ ಹೇಳಿದರು.
ಪಟ್ಟಣದ ಆಚಂಗಿ ಬಡಾವಣೆಯ ಮೊಹಿದ್ದೀನ್ ಜುಮ್ಮಾ ಮಸೀದಿ ಆವರಣದಲ್ಲಿ ನಡೆದ ವಾರ್ಷಿಕ ಸ್ವಲಾತ್ ಮತ್ತು ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿ,  ನಮಗೆ ಮಾದರಿಯಾಗಿರುವ ಪ್ರವಾದಿಯ ಜೀವನ ಚರಿತ್ರೆಯ ಅಧ್ಯಯನ ನಡೆಸದೇ ಅವರನ್ನು ಅನುಸರಿಸಲು ಸಾಧ್ಯವಿಲ್ಲ, ನಾವು ಪ್ರೀತಿಸುವ ವ್ಯಕ್ತಿಯ ಜೀವನದ ಪ್ರತಿಯೊಂದು ಅಂಶ, ಅವರ ಆದರ್ಶ ಮತ್ತು ತತ್ವಗಳ ಅಧ್ಯಯನ ಹಾಗೂ ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇಲ್ಲವಾದಲ್ಲಿ ನಮ್ಮ ಪ್ರೀತಿಯು ಕೇವಲ ತೋರಿಕೆಯ ಪ್ರೀತಿಯಾಗುತ್ತದೆ ಎಂದರು.
ಪ್ರವಾದಿ ಮಹಮ್ಮದರ  ಹುಟ್ಟು, ಬಾಲ್ಯ, ಯೌವ್ವನ, ಮದುವೆ, ಪ್ರವಾದಿತ್ವ, ಮಕ್ಕಾ ಜೀವನ, ಹಿಜರತ್, ಯುದ್ದ ಹಾಗೂ ಮರಣ.ವೈಯಕ್ತಿಕ ಜೀವನದ ಕುರಿತು ಹೆಚ್ಚು ಅಧ್ಯಯನ ನಡೆಸುತ್ತೇವೆ. ಆದರೆ,  ಅವರ ಆದರ್ಶ ತತ್ವ ಹಾಗೂ ಒಂದು ವಿಷಯದ ಕುರಿತು ಅವರು ಹೊಂದಿದ್ದ ಪರಿಕಲ್ಪನೆಯ ಬಗ್ಗೆ ತಿಳಿದುಕೊಳ್ಳಲು ಯತ್ನಿಸುವುದು ತುಂಬಾ ಕಡಿಮೆ ಎಂದರು.
ಇಸ್ಲಾಂ ಧರ್ಮ ಎಂದಿಗೂ ಇನ್ನೊಂದು ಧರ್ಮವನ್ನು ಧ್ವೇಷ ಮಾಡಲು ಹೇಳಿಕೊಟ್ಟಿಲ್ಲ ಬದಲಾಗಿ ಇನ್ನೊಂದು ಧರ್ಮದ ಸಂಸ್ಕೃತಿ ಆಚಾರ ವಿಚಾರಗಳನ್ನು ಗೌರವಿಸಲು ಹೇಳಿಕೊಟ್ಟಿದೆ ಎಂದರು.
ವೇದಿಯಲ್ಲಿ ಆಚಂಗಿ ಮೊಹಿದ್ದೀನ್ ಜುಮ್ಮಾ ಮಸೀದಿಯ ಅಧ್ಯಕ್ಷ ಹಮೀದ್, ಬದ್ರಿಯಾ ಜುಮ್ಮಾ ಮಸೀದಿಯ ಅಧ್ಯಕ್ಷ ಯಾದ್ಗಾರ್ ಜಾಕೀರ್, ಕೊಲ್ಲಹಳ್ಳಿ ಮಸೀದಿಯ ಅಧ್ಯಕ್ಷ  ಸಲೀಮ್, ಆನೆಮಹಲ್ ಮಸೀದಿಯ ಅಧ್ಯಕ್ಷ ಪೋಕರ್, ಗುಳಗಳಲೆ ಮಸೀದಿಯ ಅಧ್ಯಕ್ಷ ಖಾಸೀಮ್, ಪುರಸಭಾ ಮಾಜಿ ಅಧ್ಯಕ್ಷ ಯಾದ್ಗಾರ್ ಇಬ್ರಾಹಿಂ, ಬೇಲೂರು ಪುರಸಭ ಸದಸ್ಯ ಜಮಾಲ್, ವಕ್ಫ್ ಮಂಡಲಿ ಸದಸ್ಯ ಆನೆಮಹಲ್ ಹಸೇನಾರ್ ಇನ್ನಿತರರು ಉಪಸ್ಥಿತರಿದ್ದರು
RELATED ARTICLES
- Advertisment -spot_img

Most Popular