Saturday, April 19, 2025
Homeಸುದ್ದಿಗಳುಸಕಲೇಶಪುರವೃದ್ದೆಯನ್ನು ರಕ್ಷಿಸಿ ಮಾನವೀಯತೆ ಮರೆದ ಸಕಲೇಶಪುರ ಪೊಲೀಸರು.

ವೃದ್ದೆಯನ್ನು ರಕ್ಷಿಸಿ ಮಾನವೀಯತೆ ಮರೆದ ಸಕಲೇಶಪುರ ಪೊಲೀಸರು.

ವೃದ್ದೆಯನ್ನು ರಕ್ಷಿಸಿ ಮಾನವೀಯತೆ ಮರೆದ ಸಕಲೇಶಪುರ ಪೊಲೀಸರು.

ಸಕಲೇಶಪುರ: ಮನೆತೊರೆದು ಬಂದು ಮಳೆಯಿಂದ ನಿತ್ರಾಣಗೊಂಡಿದ್ದ ವೃದ್ದೆಯೊಬ್ಬರನ್ನು ಪೋಲಿಸರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದರು.

ಹಾಸನ ತಾಲೂಕು ಹಂಚಿಹಳ್ಳಿ ಗ್ರಾಮದವರು ಎನ್ನಲಾದ ಕಾಮಾಕ್ಷಿ ಎಂಬ ವೃದ್ದೆ ಕಳೆದ ಮೂರು ದಿನಗಳಿಂದ ಪಟ್ಟಣದಲ್ಲಿ ಬೀಕ್ಷೆ ಬೇಡಿ ರಾತ್ರಿ ವೇಳೆ ಅಂಗಡಿ ಮುಂಭಾಗದಲ್ಲಿ ಮಲಗುತ್ತಿದ್ದರು. ಆದರೆ,ಮಳೆಗಾಲದ ಚಳಿ ತಾಳಲಾರದೆ ಅಜಾದ್ ರೆಸ್ತೆಯ ಅಂಗಡಿಯೊಂದರ ಮುಂಭಾಗ ಕಾಲುಗಳು ಸೆಡತಗೊಂಡು ಕುಳಿತಲ್ಲೆ ಕುಳಿತಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಪೋಲಿಸರಿಗೆ ಮಾಹಿತಿ ಮುಟ್ಟಿಸಿದ್ದರು. ಸ್ಥಳಕ್ಕೆ ಬಂದ 112 ಸಿಬ್ಬಂದಿ ಹರೀಶ್ ಹಾಗೂ ಮಂಜುನಾಥ್ ಸ್ಥಳಕ್ಕೆ 108 ವಾಹನ ಕರೆಸಿ ವೃದ್ದೆಯನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದರು.

RELATED ARTICLES
- Advertisment -spot_img

Most Popular