Big Breaking News: ರೆಸಾರ್ಟ್ ಮಾಲಿಕ ಹಾಗೂ ಸ್ನೇಹಿತರಿಂದ ಮಾಂಸಕ್ಕಾಗಿ ಕಾಡುಕುರಿ ಬೇಟೆ: ಅರಣ್ಯ ಇಲಾಖೆಯಿಂದ ಪ್ರಕರಣ ದಾಖಲು
ಸಕಲೇಶಪುರ : ತಾಲೂಕಿನ ಹಾನುಬಾಳ್ ಹೋಬಳಿಯ ಅಚ್ಚನಹಳ್ಳಿ ರೆಸಾರ್ಟ್ ಮಾಲಿಕನೊರ್ವ ತನ್ನ ಸಹಚರರೊಂದಿಗೆ ಅಕ್ರಮವಾಗಿ ಸೆಕ್ಷನ್ 4 ಅಡಿ ಬರುವ ಅಭಯಾರಣ್ಯಕ್ಕೆ ಪ್ರವೇಶಿಸಿ ಕಾಡುಕುರಿಯೊಂದನ್ನು ಬೇಟೆಯಾಡಿದ ಪ್ರಕರಣ ಹೊರ ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಹಾನುಬಾಳ್ ಹೋಬಳಿಯ ಬಾಳೆಕೋಲು ರೆಸಾರ್ಟ್ ನ ಅವಿನಾಶ್, ಜೀವನ್, ಕೀರ್ತನ್ ,ಶಿಶಿರ ಎಂಬುವರು ಬುಧವಾರ ರಾತ್ರಿ ಸೆಕ್ಷನ್ 4 ಅಡಿ ಬರುವ ಶೋಲಾ ಅರಣ್ಯದಡಿ ಕಾಡುಕುರಿಯೊಂದನ್ನು ಭೇಟೆಯಾಡಿ ರೆಸಾರ್ಟ್ ನಲ್ಲಿ ಕುರಿ ಕಡಿದು ಮಾಂಸ ಬೇಯಿಸಲು ಮುಂದಾದಾಗ ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿದಾಗ ಅವಿನಾಶ್, ಜೀವನ್,ಕೀರ್ತನ್ ಎಂಬುವರು ಪರಾರಿಯಾಗಿದ್ದು ಶಿಶಿರ್ ಎಂಬುವರನ್ನು ಅರಣ್ಯ ಇಲಾಖೆಯವರು ವಶಕ್ಕೆ ಪಡೆದಿದ್ದಾರೆ. ಅರಣ್ಯ ಇಲಾಖೆಯವರು ಒಂದು ವೆರೆ ಲಕ್ಷದ ಮೌಲ್ಯದ ಬಂದೂಕು, ಒಂದು ಪಿಕ್ ಅಪ್ , ಒಂದು ಆಲ್ಟೋ ಕಾರು , ಒಂದು ಬೈಕ್, ಒಂದು ಮರ ಕತ್ತರಿಸೀ ಯಂತ್ರ ,12 ಕೆ.ಜಿ ಕುರಿ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ.ಕಾರ್ಯಾಚರಣೆಯಲ್ಲಿ ಎ.ಸಿ.ಎಫ್ ಸುರೇಶ್ ಬಾಬು,ರೇಂಜರ್ ಶಿಲ್ಪ, ಉಪ ಅರಣ್ಯಾಧಿಕಾರಿಗಳಾದ ಮೋಹನ್ ಕುಮಾರ್, ವೇಣುಗೋಪಾಲ್, ಸಿಬ್ಬಂದಿಗಳಾದ ಉಮೇಶ್, ಯೋಗೇಶ್, ಮಹಾದೇವ್,ಮುಂತಾದವರು ಹಾಜರಿದ್ದರು.