Thursday, April 24, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ/ಬಾಳ್ಳುಪೇಟೆ:ಪ್ರತ್ಯೇಕ ಪ್ರಕರಣದಲ್ಲಿ ನಾಲ್ವರು ಗಾಂಜಾ ವ್ಯಸನಿಗಳ ವಿರುದ್ಧ ಪ್ರಕರಣ ದಾಖಲು

ಸಕಲೇಶಪುರ/ಬಾಳ್ಳುಪೇಟೆ:ಪ್ರತ್ಯೇಕ ಪ್ರಕರಣದಲ್ಲಿ ನಾಲ್ವರು ಗಾಂಜಾ ವ್ಯಸನಿಗಳ ವಿರುದ್ಧ ಪ್ರಕರಣ ದಾಖಲು

ಸಕಲೇಶಪುರ/ಬಾಳ್ಳುಪೇಟೆ:ಪ್ರತ್ಯೇಕ ಪ್ರಕರಣದಲ್ಲಿ ನಾಲ್ವರು ಗಾಂಜಾ ವ್ಯಸನಿಗಳ ಪ್ರಕರಣ ದಾಖಲು

ಸಕಲೇಶಪುರ : ಖಚಿತ ಮಾಹಿತಿ ಮೇರೆಗೆ ತಾಲೂಕಿನ ಬಾಳ್ಳುಪೇಟೆ ಹಾಗೂ ಬಾಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗಾಂಜಾ ಸೇವನೆ ಹಾಗೂ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿದ್ದಾರೆ.

ತಾಲೂಕಿನ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯ ಬಾಳ್ಳುಪೇಟೆಯ ಜೆಪಿ ನಗರದಲ್ಲಿ ರಸ್ತೆ ಬದಿಯಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ವೇಳೆ ಪೋಲಿಸ್ ಪೇದಗಳಾದ ಲೊಕೇಶ್ ಸುನೀಲ್ ಹಾಗೂ ವೆಂಕಟೇಶ್ ರವರು ಗ್ರಾಮದ 22 ವರ್ಷದ ಸುಬ್ರಮಣ್ಯ ಬಿನ್. ವಿಜಯಕುಮಾರ್ ಹಾಗೂ 24 ವರ್ಷದ ಶಾಹಬಾಜ್ ಬಿನ್.ದಸ್ತಗೀರ್ ರವರನ್ನು ಹಿಡಿದುಕೊಂಡು ಠಾಣೆ ಕರೆದುಕೊಂಡು ವಿಚಾರಣೆ ಹಾಗೂ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಡ ಪಟ್ಟಿದೆ.

 

ಮತ್ತೋಂದು ಪ್ರಕರಣದಲ್ಲಿ ಬೆಳಗೋಡು ಸಮೀಪದ ಕಾಕನಮನೆ ಗ್ರಾಮದ ಬಸ್ ನಿಲ್ದಾಣದ ಹಿಂಭಾಗದಲ್ಲಿ ಬಾಳ್ಳುಪೇಟೆ ಜೆ.ಪಿ ನಗರ ನಿವಾಸಿ 26 ವರ್ಷದ ತಿರುಮಲ್ಲೇಶ್ ಬಿನ್ ತ್ಯಾಗರಾಜ್ ಹಾಗೂ 20 ವರ್ಷದ ರದ್ವಾನ್ ಬಿನ್. ಖಾಸಿಂ ರವರನ್ನು ಹಿಡಿದು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ.ಯಾರೋ ಹೊರಗಿನಿಂದ ಬಂದ ವ್ಯಕ್ತಿಗಳು ಗಾಂಜಾ ಸೊಪ್ಪು ನೀಡಿದ್ದಾರೆ ಎಂದು ಬಾಯಿಬಿಟ್ಟಿದ್ದಾರೆ.ನಾಲ್ವರ ಮೇಲೆ ಎನ್.ಡಿ.ಪಿ.ಎಸ್ ಕಾಯ್ದೆ ಅನ್ವಯ ಪ್ರಕರಣ ದಾಖಲು ಮಾಡಲಾಗಿದೆ.

ಪ್ರಕರಣ ಸಂಭಂದ ಡಿ.ವೈ.ಎಸ್.ಪಿ ಮಿಥುನ್, ವೃತ್ತ ನೀರಿಕ್ಷಕರಾದ ಚೈತನ್ಯ, ಗ್ರಾಮಾಂತರ ಠಾಣಾ ಪಿ.ಎಸ್.ಐ ಬಸವರಾಜ್ ರವರ ಮಾರ್ಗದರ್ಶನದಲ್ಲಿ ಪೊಲೀಸ್ ಸಿಬ್ಬಂದಿಗಳು ದಾಳಿ ನೆಡೆಸಿದರು.

RELATED ARTICLES
- Advertisment -spot_img

Most Popular