ಬಿಜೆಪಿ ವತಿಯಿಂದ ಜನಸಂಕಲ್ಪ ಯಾತ್ರೆ ಪೂರ್ವಭಾವಿ ಸಭೆ
ಸಕಲೇಶಪುರ: ಭಾರತೀಯ ಜನತಾ ಪಾರ್ಟಿ ಸಕಲೇಶಪುರ-ಆಲೂರು-ಕಟ್ಟಾಯ ವಿಧಾನಸಭಾ ಕ್ಷೇತ್ರದ ಜನಸಂಕಲ್ಪ ಯಾತ್ರೆಯ ಪೂರ್ವ ಭಾವಿ ಸಭೆಯಲ್ಲಿ ಕೆಲವರು ಬಾಳ್ಳುಪೇಟೆಯಲ್ಲಿ ಕಾರ್ಯಕ್ರಮ ಮಾಡಿದರೆ ಉತ್ತಮ ಆಲೂರು-ಕಟ್ಟಾಯ- ಸಕಲೇಶಪುರ ಭಾಗಗಳ ಕಾರ್ಯಕರ್ತರಿಗೆ ಅನುಕೂಲವಾಗುತ್ತದೆಂದು ಅಭಿಪ್ರಾಯಪಟ್ಟರು. ಬಿಜೆಪಿ ಮುಖಂಡ ಮೈ.ವಿ ರವಿಶಂಕರ್ ಮಾತನಾಡಿ ರಾಜ್ಯದಲ್ಲಿ ಮೂರು ತಂಡ ಚುನಾವಣೆಗಾಗಿ ಸಂಘಟನೆ ಮಾಡುತ್ತಿದೆ. ಮತ್ತೊಮ್ಮೆ ಅಧಿಕಾರಕ್ಕೆ ತರಬೇಕಾಗಿದ್ದು ಈ ನಿಟ್ಟಿನಲ್ಲಿ ಸಕಲೇಶಪುರ ವಿಧಾನಸಭಾ ಕ್ಷೇತ್ರವನ್ನು ಗೆಲ್ಲಲೇಬೇಕೆಂಬ ನಿಟ್ಟಿನಲ್ಲಿ ಶ್ರಮ ಹಾಕಬೇಕಾಗಿದೆ ಎಂದರು
ಈ ಸಂಧರ್ಭದಲ್ಲಿ ಮಾಜಿ ಶಾಸಕರುಗಳಾದ ಎಚ್.ಎಂ ವಿಶ್ವನಾಥ್, ಬಿ.ಆರ್ ಗುರುದೇವ್, ಜಿಲ್ಲಾ ಉಪಾಧ್ಯಕ್ಷೆ ಚಂದ್ರಕಲಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೋಹಿತ್ ಜಂಬರ್ಡಿ, ಬಿಜೆಪಿ ತಾಲೂಕು ಅಧ್ಯಕ್ಷ ಮಂಜುನಾಥ್ ಸಂಘಿ, ಆಲೂರು ಮಂಡಲ ಅಧ್ಯಕ್ಷ ಹರೀಶ್, ಬಿಜೆಪಿ ಮುಖಂಡರಾದ ನಾರ್ವೆ ಸೋಮಶೇಖರ್, ಸಿಮೆಂಟ್ ಮಂಜುನಾಥ್, ರೈತ ಮೋರ್ಚಾ ಜಿಲ್ಲಾದ್ಯಕ್ಷ ಬ್ಯಾಕರವಳ್ಳಿ ಭಾಸ್ಕರ್, ಪ್ರಧಾನ ಕಾರ್ಯದರ್ಶಿಯರಾದ ಲೋಕೇಶ್, ಸಂದೇಶ್ ಸೇರಿದಂತೆ ಇತರರು ಹಾಜರಿದ್ದರು.