ಸಕಲೇಶಪುರ : ಬಾಗೆ ಗ್ರಾಮ ಪಂಚಾಯತಿಯಲ್ಲಿ ಹಕ್ಕು ಪತ್ರ ವಿತರಣೆಯಲ್ಲಿ ಭಾರಿ ಗೋಲ್ ಮಾಲ್.
ಸರ್ಕಾರಿ ಸೇವೆಯಲ್ಲಿದ್ದು ಪತ್ನಿಯ ಹೆಸರಿನಲ್ಲಿ ನಿವೇಶನ ಪಡೆದ ಕ್ಯಾಮನಹಳ್ಳಿ ಪಿಡಿಓ ಸಂಗಮೇಶ್.
ಲೋಕಾಯುಕ್ತ ತನಿಖೆಗೆ ಗ್ರಾಮ ಪಂಚಾಯತಿ ಸದಸ್ಯ ಚಾರ್ಲ್ಸ್ ಅಗ್ರಹ.
40ಕ್ಕೂ ಹೆಚ್ಚು ಹಕ್ಕು ಪತ್ರಗಳು ನಕಲಿಯಾಗಿವೆ. ಅಧಿಕಾರಿಗಳ ಸಹಿ ದುರ್ಬಳಕೆ.
ಸಂಪೂರ್ಣ ಹಗರಣದ ಮಾಹಿತಿ 👇👇👇
ಸಕಲೇಶಪುರ: ಅಕ್ರಮವಾಗಿ ಪತ್ನಿಯ ಹೆಸರಿನಲ್ಲಿ ಜನತಾ ನಿವೇಶನ ಮಂಜೂರು ಮಾಡಿಸಿಕೊಂಡಿರುವ ಪಿಡಿಓ ಸಂಗಮೇಶ್ ರವರನ್ನು ಕೂಡಲೆ ಕರ್ತವ್ಯದಿಂದ ವಜಾ ಮಾಡಬೇಕೆಂದು ಬಾಗೆ ಗ್ರಾ.ಪಂ ಸದಸ್ಯ ಚಾರ್ಲ್ಸ್ ಒತ್ತಾಯಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಇದೀಗ ತಾಲೂಕಿನ ಕ್ಯಾಮನಹಳ್ಳಿ ಗ್ರಾ.ಪಂಯಲ್ಲಿ ಪಿಡಿಓ ಆಗಿ ಕಾರ್ಯನಿರ್ವಹಿಸುತ್ತಿರುವ ಸಂಗಮೇಶ್ ಎಂಬುವರು 2013-14 ರಲ್ಲಿ ಬಾಗೆ ಗ್ರಾಮ ಪಂಚಾಯತಿಯ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುವಾಗ ಸರ್ಕಾರದಿಂದ ಮಂಜೂರು ಮಾಡುವ ಗ್ರಾಮೀಣ ಆಶ್ರಯ ನಿವೇಶನ ಯೋಜನೆಯಲ್ಲಿ ಬಾಗೆ ಗ್ರಾಮದ ಸರ್ವೆ ನಂ 15 ರಲ್ಲಿ 120 ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು.ಬಾಗೆ ಗ್ರಾ.ಪಂಯಲ್ಲಿ ಸರ್ಕಾರಿ ನೌಕರಿ ಕರ್ತವ್ಯದ ಅವಧಿಯಲ್ಲಿ ತಮ್ಮ ಪ್ರಭಾವ ಬಳಸಿ ತಮ್ಮ ಪತ್ನಿಯಾದ ಸುಧಾ ಕೋಂ ಸಂಗಮೇಶ ಎಂಬ ಹೆಸರಿನಿಂದ ಬಾಗೆ ಗ್ರಾಮದಲ್ಲಿ ನಿವೇಶನವನ್ನು ಮಂಜೂರು ಮಾಡಿಸಿ ಕೊಂಡಿಸಿಕೊಂಡಿರುವುದಲ್ಲದೆ ಸದರಿ ನಿವೇಶನದ ಖಾತೆ ಸಹ ಮಾಡಿಕೊಂಡು ಕಂದಾಯವನ್ನು ಸಹ ಪಾವತಿ ಮಾಡಿರುತ್ತಾರೆ. ಇದಲ್ಲದೆ ಬಾಗೆ ಗ್ರಾಮ ಪಂಚಾಯತಿಯ ಪ್ರಭಾರಿ ಪಂಚಾಯತಿ ಅಭಿವೃದ್ದಿ ಆಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದು ಒಟ್ಟಾರೆಯಾಗಿ ಇವರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ನಿವೇಶನ ಮಂಜೂರು ಮಾಡಿಕೊಂಡಿರುತ್ತಾರೆ. ಗ್ರಾಮೀಣ ನಿವೇಶನ ಯೋಜನೆಯ ನಿಯಮಾವಳಿಗಳಲ್ಲಿ ಸರ್ಕಾರಿ ನೌಕರ , ಆಥವಾ 32000 ಕ್ಕಿಂತ ಹೆಚ್ಚು ಆದಾಯವಿರುವವರು ನಿವೇಶನ ಪಡೆಯುವಂತಿಲ್ಲ ಎಂಬ ನಿಯಮವಿದೆ. ಈ ಹಿನ್ನೆಲೆಯಲ್ಲಿ ಬಡ ನಿವೇಶನ ರಹಿತರಿಗೆ ನೀಡಬೇಕಾದ ನಿವೇಶನವನ್ನು ಕಬಳಿಸಿರುವುದರಿಂದ ಈತನನ್ನು ಸರ್ಕಾರಿ ಸೇವೆಯಿಂದ ವಜಾ ಮಾಡಬೇಕು ಹಾಗೂ ಈತ ಪಡೆದಿರುವ ನಿವೇಶನವನ್ನು ಹಿಂಪಡೆದು ಬಡ ನಿವೇಶನ ರಹಿತರಿಗೆ ಹಂಚಿಕೆ ಮಾಡಬೇಕು ಮತ್ತು ಈತನಿಗೆ ಸಹಕರಿಸುತ್ತಿರುವ ಎಲ್ಲಾ ಮೇಲಾಧಿಕಾರಿಗಳ ಮೇಲೆ ತನಿಖೆ ನಡೆಸಬೇಕು. ಸರ್ಕಾರದ ಸುತ್ತೋಲೆಯಂತೆ ಒಂದು ಎಕರೆಗೆ ಕೇವಲ 20 ನಿವೇಶನಗಳನ್ನು ಮಂಜೂರು ಮಾಡಬೇಕು ಅಂದರೆ 4 ಎಕರೆಗೆ 80 ನಿವೇಶನಗಳನ್ನು ನೀಡಬೇಕಿತ್ತು. ಆದರೆ ಇಲ್ಲಿ 120ಕ್ಕೂ ಹೆಚ್ಚು ಜನಕ್ಕೆ ಹಕ್ಕುಪತ್ರ ನೀಡಿ ಕಳೆದ 14 ವರ್ಷಗಳಿಂದ ಪಂಚಾಯತಿಗೆ ಅಕ್ರಮವಾಗಿ ಕಂದಾಯ ಕಟ್ಟಿಸಿಕೊಳ್ಳಲಾಗುತ್ತಿದೆ. ಬಹುತೇಕರಿಗೆ ತಮ್ಮ ನಿವೇಶನ ಯಾವುದು ಎಂದು ತಿಳಿದಿಲ್ಲ. ಅರ್ಹತೆಯಿಲ್ಲದ ಹಲವರಿಗೆ ನಿವೇಶನದ ಹಕ್ಕುಪತ್ತ ನೀಡಲಾಗಿದೆ. ಇನ್ನು ತಹಶೀಲ್ದಾರ್ ಸಹಿ ನಕಲು ಮಾಡಿ ಸಹ ನಕಲು ಹಕ್ಕುಪತ್ರಗಳನ್ನು ನೀಡಲಾಗಿದೆ. ಹಕ್ಕುಪತ್ರಗಳು ನೀಡುವಾಗ ಅದರ ಒಂದು ಪ್ರತಿ ಗ್ರಾ.ಪಂಯಲ್ಲಿ, ಕಂದಾಯ ಇಲಾಖೆಯಲ್ಲಿ, ತಾ.ಪಂಯಲ್ಲಿ, ಜಿ.ಪಂಯಲ್ಲಿ ಇರಬೇಕು. ಆದರೆ ಇಲ್ಲಿ ಈ ರೀತಿಯಂತೆ ದಾಖಲೆಗಳು ಲಭ್ಯವಿಲ್ಲ. ಇನ್ನಿಬ್ಬರು ಸರ್ಕಾರಿ ನೌಕರರ ಕುಟುಂಬಕ್ಕೆ ಸಹ ಹಕ್ಕು ಪತ್ರ ನೀಡಲಾಗಿದ್ದು ಈ ಕುರಿತು ಕೂಡಲೆ ಉನ್ನತ ಅಧಿಕಾರಿಗಳಿಂದ ತನಿಖೆ ಮಾಡಿ ತಪ್ಪಿಸ್ಥತರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು. 3-08-2022 ರಂದು ಇದೇ ವಿಷಯದ ಕುರಿತು ಜಿ.ಪಂ ಮುಖ್ಯ ಕಾರ್ಯನಿವಾರ್ಹಣಾಧಿಕಾರಿಗಳಿಗೆ ದೂರು ನೀಡಿ ಅಕ್ರಮದ ಕುರಿತು ಎಲ್ಲಾ ದಾಖಲಾತಿಗಳನ್ನು ನೀಡಿದರು ಸಹ ಯಾವುದೆ ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾಂತರಾಜುರವರು ಅಕ್ರಮ ಮಾಡಿದವರ ಮೇಲೆ ಕ್ರಮ ಜರುಗಿಸುತ್ತಿಲ್ಲ, ಅವರೇ ಭ್ರಷ್ಟಚಾರವನ್ನು ಪ್ರೋತ್ಸಾಹಿಸುತ್ತಿದ್ದಾರೆ. ಈ ಕುರಿತು ಅಕ್ರಮದಲ್ಲಿ ಭಾಗಿಯಾದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಹಕ್ಕುಪತ್ರ ನೀಡಿರುವುದನ್ನು ಪರಿಶೀಲಿಸಿ ಅರ್ಹ ಬಡವರಿಗೆ ಹಕ್ಕುಪತ್ರ ನೀಡಬೇಕು. ಇಲ್ಲದಿದ್ದಲ್ಲಿ ಜಿ.ಪಂ ಆವರಣದಲ್ಲಿ ಪ್ರತಿಭಟನೆ ಮಾಡಲಾಗುತ್ತದೆ ಎಂದಿದ್ದಾರೆ.