ಸಕಲೇಶಪುರ : 1615ನೇ ಮದ್ಯವರ್ಜನ ಶಿಬಿರದ ಸಮಾರೋಪ.
ನವಜೀವನಕ್ಕೆ ಕಾಲಿಟ್ಟ 101 ಜನರು
ಸಕಲೇಶಪುರ : ಕಳೆದ ಎಂಟು ದಿನಗಳಿಂದ ನಗರದ ತೇರಪಂಥ್ ಸಭಾ ಭವನದಲ್ಲಿ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ವತಿಯಿಂದ ನೆಡೆಯುತ್ತಿದ್ದ 1615ನೇ ಮದ್ಯ ವರ್ಜನ ಶಿಬಿರದ ಸಮಾರೋಪ ಸಮಾರಂಭ ನೆಡೆಯಿತು.
ಕಾರ್ಯಕ್ರಮದಲ್ಲಿ 101 ಜನರು ಮದ್ಯ ವ್ಯಸನದಿಂದ ಮುಕ್ತರಾಗಿ ನವ ಜೀವನಕ್ಕೆ ಕಾಲಿಟ್ಟರು.
ಕಾರ್ಯಕ್ರಮದಲ್ಲಿ 1615 ನೇ ಮದ್ಯ ವರ್ಜನಾ ಶಿಬಿರದ ಅಧ್ಯಕ್ಷ ವಿಜಯ ರಾಜ್, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ರಾಜ್ಯಧ್ಯಕ್ಷ ರಾಜಣ್ಣ ಮೂ. ಕೊರವಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೈಸೂರು ಪ್ರಾದೇಶಿಕ ನಿರ್ದೇಶಕ ಬಿ. ಜಯರಾಮ ನೆಲ್ಲಿತ್ತಾಯ, ಹಾಸನ ಜಿಲ್ಲಾ ನಿರ್ದೇಶಕರಾದ ಮಮತ ಹರೀಶ್ ರಾವ್, ಜಿಲ್ಲಾ ಜನ ಜಾಗೃತಿ ವೇದಿಕೆಯ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಮಲೆನಾಡು ವೀರಶೈವ ಸಮಾಜದ ಅಧ್ಯಕ್ಷ ದೇವರಾಜ್(ದಿವಾನ್), ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷೆ ಶಾರದಾ ಗುರುಮೂರ್ತಿ, ನಂಜಮ್ಮ ಮಹಿಳಾ ಸಮಾಜದ ಅಧ್ಯಕ್ಷ ಚೆನ್ನವೇಣಿ ಎಂ ಶೆಟ್ಟಿ, ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯರಾದ ಗಿರೀಶ್ ಮಂಜುನಾಥ್, ಧರ್ಮರಾಜ್ ಮದ್ಯ ವರ್ಜನ ಶಿಬಿರದ ಗೌರವಾಧ್ಯಕ್ಷ ದೇವರಾಜ್(ನಂದಿ ಕೃಪಾ )ತಾಲೂಕು ಪಂಚಾಯತಿ ಮಾಜಿ ಸದ್ಯಸ ಸಿಮೆಂಟ್ ಮಂಜುನಾಥ್, ಕಾಂಗ್ರೆಸ್ ಮುಖಂಡ ಮುರಳಿ ಮೋಹನ್, ವರ್ಜನ ಶಿಬಿರ ಪ್ರಾದೇಶಿಕ ನಿರ್ದೇಶಕ ಬಾಸ್ಕರ್,ಶಿಬಿರದ ಯೋಜನಾಧಿಕಾರಿ ಕುಮಾರ್ ಸೇರಿದಂತೆ ಮುಂತಾದವರು ಇದ್ದರು.