ಅಧಿಕಾರಿಗಳ ಸಂಧಾನ ಸಫಲ: ಮಾಜಿ ಸೈನಿಕರ ಪ್ರತಿಭಟನೆ ವಾಪಸ್
ಸಕಲೇಶಪುರ ಭೂಮಿ ಮಂಜೂರಾತಿಗೆ ಆಗ್ರಹಿಸಿ ಪಟ್ಟಣದ ಮಿನಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಮಾಜಿ ಸೈನಿಕರು ತಮ್ಮ ಮುಷ್ಕರವನ್ನು ಹಿಂಪಡೆದಿದ್ದಾರೆ .
ಎಚ್ ಕೆ ಕುಮಾರಸ್ವಾಮಿ ಸಂಜೆ ಪ್ರತಿಭಟನಾಕಾರರ ಬಳಿ ಬಂದು ಸರ್ಕಾರದ ಜತೆ ಮಾತನಾಡುವುದಾಗಿ ಭರವಸೆ ನೀಡಿದ್ದರು ಸಹ ಪ್ರತಿಭಟನೆ ಹಿಂಪಡೆಯದ ಮಾಜಿ ಸೈನಿಕರು ಸಂಜೆ 8 ಗಂಟೆ ಉಪವಿಭಾಗಾಧಿಕಾರಿ ಅನ್ಮೋಲ್ ಜೈನ್ ಅರಣ್ಯ ಇಲಾಖೆಯ ಎಸಿಎಫ್ ಸುರೇಶ್ ಹಾಗೂ ತಹಸೀಲ್ದಾರ್ ಜೈ ಕುಮಾರ್ ರವರು ಪ್ರತಿಭಟನಾಕಾರರೊಂದಿಗೆ ನಡೆಸಿದ ಸಂಧಾನ ಸಫಲವಾಗಿದ್ದು ಮಾಜಿ ಸೈನಿಕರು ತಮ್ಮ ಪ್ರತಿಭಟನೆಯನ್ನು ಹಿಂಪಡೆಯುತ್ತಿದ್ದೇವೆ ಎಂದು ತಿಳಿಸಿದ್ದಾರೆ .
ತಹಶೀಲ್ದಾರ್ ಜೈಕುಮಾರ್ ಬೆಳಿಗ್ಗೆಯಿಂದಲೂ ಪ್ರತಿಭಟನಾಕಾರರ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದರು .ಸಂಜೆ ಸ್ಥಳಕ್ಕಾಗಮಿಸಿದ ಉಪ ವಿಭಾಗಾಧಿಕಾರಿಗಳಿಗೆ ತಹಶೀಲ್ದಾರ್ ರವರು ಇದುವರೆಗೂ ಆಗಿರುವ ಪ್ರಗತಿಯ ಬಗ್ಗೆ ಮನವರಿಕೆ ಮಾಡಿಕೊಟ್ಟರು .
ಈ ಸಂದರ್ಭದಲ್ಲಿ ಮಾಜಿ ಸೈನಿಕರ ಸಂಘದ ತಾಲೂಕು ಅಧ್ಯಕ್ಷ ಕೃಷ್ಣಪ್ಪ ,ಮುಖಂಡರಾದ ಧರ್ಮಪ್ಪ ಸೇರಿದಂತೆ ಇನ್ನಿತರರಿದ್ದರು