ಸಕಲೇಶಪುರ : ಮಾಜಿ ಸೈನಿಕರಿಗೆ ಕಾಯ್ದಿರಿಸಿದ ಭೂಮಿ ನೀಡಲು ಮೀನಮೇಷ .
ಸರ್ಕಾರ ಹಾಗೂ ಕೋರ್ಟ್ ಆದೇಶವಿದ್ದರೂ ಮಂಜೂರು ಮಾಡದ ಅಧಿಕಾರಿಗಳ ವಿರುದ್ಧ ಮಾಜಿ ಸೈನಿಕರಿಂದ ಹೋರಾಟ .
ಸಕಲೇಶಪುರ ತಾಲ್ಲೂಕ್‌ನಲ್ಲಿ ಸೈನಿಕರಿಗೆ / ಮಾಜಿ ಸೈನಿಕರಿಗೆ / ಅವಲಂಬಿತರಿಗೆ ಭೂಮಿ ನೀಡಲು 1972 ನೇ ಇಸವಿಯಲ್ಲಿ ಮೈಸೂರು ಗೆಜೆಟ್‌ನಲ್ಲಿ 5,499-39 ಎಕರೆ ಜಮೀನನ್ನು ಕಾದಿರಿಸಲಾಗಿತ್ತು ಈ ಕಾದಿರಿಸಿದ ಭೂಮಿಯಲ್ಲಿ ಸರ್ಕಾರದ ದಾಖಲೆಯಂತೆ ಈವರೆಗೆ ನೀಡಿದ ಭೂಮಿ ಅರಣ್ಯ ಇಲಾಖೆಗೆ ಸೇರಿದ್ದಾಗಿದೆ. ಈ ಭೂಮಿ ಮಂಜೂರು ಆಗಿದ್ದರೂ, ಮಾಜಿ ಸೈನಿಕರ ಸ್ವಾಧೀನಕ್ಕೆ ಸಿಗಲಿಲ್ಲ, ಇಲ್ಲವೆ ಬದಅ ಭೂಮಿ ನೀಡಲು ಯಾವುದೇ ರೀತಿಯ ಕ್ರಮ ಕೈಗೊಳ್ಳಲಿಲ್ಲ. ಇಲ್ಲಿಯವರೆಗೆ 60 ಕ್ಕೂ ಹೆಚ್ಚು ಮಾಜಿ ಸೈನಿಕರು ನ್ಯಾಯಾಲಯದ ಆದೇಶ ಪಡೆದಿದ್ದು, ಭೂಮಿ ನೀಡಲು ಸರ್ಕಾರದ ಆದೇಶವಿದ್ದರು ತಾಲ್ಲೂಕು ಆಡಳಿತ ಭೂಮಿ ಮಂಜೂರು ಮಾಡಿಕೊಡಲಿಲ್ಲ.
ಎಲ್ಲಾ ದಾಖಲೆಗಳು ಕ್ರಮಬದ್ಧವಾಗಿದ್ದು, ಅರಣ್ಯ ಇಲಾಖೆಒಪ್ಪಿಗೆ ನೀಡಿದ್ದರು ಮಂಜೂರು ಮಾಡಲಿಲ್ಲ. 35 ವೀರ ಮಹಿಳೆಯರಿಗೆ ಭೂಮಿ ನೀಡಲು ಜಿಲ್ಲಾಧಿಕಾರಿಗಳು ಮಂಜೂರು ಮಾಡಿದ್ದರು, ಇವರಲ್ಲಿ 5 ಮಹಿಳೆಯರಿಗೆ ಹಕ್ಕುಪತ್ರ ನೀಡಿದೆ. ಈ ಭೂಮಿ ಕೂಡ ಕಾದಿರಿಸಿದ ಅರಣ್ಯ ಪ್ರದೇಶವಾಗಿದ್ದು, ಭೂಮಿಯನ್ನು ವಶಕ್ಕೆ ಪಡೆಯಲು ಆಗಿಲ್ಲ. ಇದಲ್ಲದೆ 5499-39 ಎಕರೆಯಲ್ಲಿ ಭೂಮಿ ವತ್ತುವರಿಯಾಗಿದೆ ಸಕಲೇಶಪುರ ತಾಲ್ಲೂಕಿನಲ್ಲಿ ಈಗ 1189 ಎಕರೆ ಭೂಮಿಯನ್ನು ಮಾತ್ರ ಕೊಡಲು ಸಾಧ್ಯವೆಂದು ಕಂದಾಯ ಇಲಾಖೆ ನ್ಯಾಯಾಲಯಕ್ಕೆ ಪ್ರಮಾಣಪತ್ರ ನೀಡಿದ್ದು, ನ್ಯಾಯಾಲಯ ಕೂಡ, ಸಮ್ಮತಿಸಿ ಮಾಜಿ ಸೈನಿಕರು / ಸೈನಿಕರು / ಅವಲಂಬಿತರಿಗೆ ಭೂಮಿ ನೀಡಲು ಆದೇಶಿಸಿದೆ. ಆದರೂ ಭೂಮಿಯನ್ನು ಈವರೆಗೂ ನೀಡಲಿಲ್ಲ. ಸುಮಾರು 82 ಸರ್ವೆ ನಂಬರ್ ಗುರುತಿಸಿ ಉಪವಿಭಾಗಾಧಿಕಾರಿಗಳು ಪಹಣಿಯಲ್ಲಿ ಕಾದಿರಿಸಿದರು ಕೂಡ ಯಾರಿಗೂ ಮಂಜೂರು ಆಗಲಿಲ್ಲ. ಅಲ್ಲದೆ ಮಾನ್ಯ ಸಚಿವರಾದ ಆರ್.ಅಶೋಕ್‌ರವರು ಭೂಮಿ ಇಲ್ಲದ ಜಾಗದಲ್ಲಿ ನಿವೇಶನ ನೀಡುವುದಾಗಿ ಮಾಧ್ಯಮಕ್ಕೆ ತಿಳಿಸಿದರು. ಆದರೆ ಸಕಲೇಶಪುರ ಪುರಸಭೆಗೆ ಹೊಂದಿಕೊಂಡಂತೆ ಸುಮಾರು 40 ಎಕರೆ ಸರ್ಕಾರಿ ಭೂಮಿ ವತ್ತುವರಿಯಾಗಿದ್ದು, ಈ ಭೂಮಿಯನ್ನು ಖುಲ್ಲಾ ಮಾಡಿಸಿ, ನಿವೇಶನ ಕೊಡಲು ಕ್ರಮಕೈಗೊಳ್ಳಬಹುದಾಗಿತ್ತು. ಆದರೆ ಕೋರ್ಟ್ ಆದೇಶ ಹಾಗೂ ಜಿಲ್ಲಾಧಿಕಾರಿಗಳ/ ಸರ್ಕಾರದ ಆದೇಶವನ್ನು ಉಲ್ಲಂಘಿಸಲಾಗಿದ್ದು, ಈ ವರೆಗೂ ಯಾವುದೇ ಭೂಮಿಯನ್ನು ಮಂಜೂರು ಮಾಡಲಿಲ್ಲ. ಅಲ್ಲದೆ ಅರಣ್ಯ ಇಲಾಖೆಯಿಂದ ಸರಿಯಾದ ಮಾಹಿತಿ ಪಡೆಯಲು ವಿಫಲರಾಗಿದ್ದಾರೆ. ಪ್ರತಿವರ್ಷ ಕಾನೂನಿನಂತೆ, ಕಂದಾಯ ಇಲಾಖೆಯಯಿಂದ ಲಭ್ಯವಿರುವ ಭೂಮಿಯನ್ನು ಪ್ರಕಟಿಸಲಿಲ್ಲ. ಕೋರ್ಟ್ ಹಾಗೂ ಸರ್ಕಾರದ ಆದೇಶದಂತೆ ಸ್ಥಳೀಯ ಮಾಜಿ ಸೈನಿಕರಿಗೆ / ಸೈನಿಕರಿಗೆ ಭೂಮಿ ಮಂಜೂರು ಮಾಡಿಕೊಡಬೇಕು ಹಾಗೂ ದಿನಾಂಕ 19-11-2016ರ ಸುತ್ತೋಲೆ ಆದೇಶವನ್ನು ಪಾಲಿಸಬೇಕಾಗಿ ಎಂದು ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕೃಷ್ಣ ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ 50ಕ್ಕೂ ಹೆಚ್ಚು ಮಾಜಿ ಸೈನಿಕರು ಪಾಲ್ಗೊಂಡಿದ್ದರು.