*ಶಿಕ್ಷಕಿ,ಖ್ಯಾತ ನಿರೂಪಕಿ,ಉಮಾದೇವಿಯವರಿಗೆ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ-2023′ ಪ್ರಶಸ್ತಿ*
“ನಿರೂಪ’ ಎನ್ನುವುದು ಚರಿತ್ರೆ ಕಾಲದಲ್ಲಿ ರಾಜರಿಂದ ಕೆಳ
ಅಂತಸ್ತಿನ ನವರಿಗೆ ಕಳಿಸುವ ಪತ್ರ ವೃತ್ತಾಂತವಾಗಿತ್ತು. ಈ ನಿರೂಪವು ಇಂದು ಆಧುನಿಕ ಜಗತ್ತಿನಲ್ಲಿ
“ನಿರೂಪಣೆಯಾಗಿ’ ಭಿನ್ನವಾದ ಅರ್ಥವನ್ನು
ನೀಡುತ್ತದೆ. ಯಾವುದೇ ಒಂದು ಸಮಾರಂಭ, ಕಾರ್ಯಕ್ರಮಗಳಲ್ಲಿ ಅಧ್ಯಕ್ಷ, ಅತಿಥಿ ಅಭ್ಯಾಗತರ ಮಾತುಗಳಿಗೆ ಕೊಂಡಿಯಾಗಿ ಜೀವ ತುಂಬಿ ಇಡೀ ಸಮಾರಂಭವನ್ನೇ ಚೈತನ್ಯಶೀಲಗೊಳಿಸುವ ಅಯಸ್ಕಾಂತ
ಕಲೆ ಎಂದರೆ ನಿರೂಪಣಾ ಕಲೆ.ಈ ನಿರೂಪಣಾ ಚಮತ್ಕಾರದಿಂದ ಸಮಾರಂಭಗಳಲ್ಲಿಯ ಒಬ್ಬೊಬ್ಬರ ನ್ಯೂನ್ಯತೆಗಳನ್ನು, ಜೊಳ್ಳನ್ನು ಮರೆಮಾಚಿಸಿ ತನ್ನ ಅಭೂತಗುಣದಿಂದ ಪ್ರೇಕ್ಷಕರನ್ನು ರಂಜಿಸುವುದರ ಜೊತೆಗೆ ಅಲ್ಲಿ ನಡೆದ ಭಾಷಣಗಳಿಗೆ ಬೆಸುಗೆ ಹಾಕಿ ಪರಿಚಯಿಸುವುದರೊಂದಿಗೆ ಅವರುಗಳ ಮಾತುಗಳ
ಮರ್ಮವನ್ನು ಕ್ಲುಪ್ತವಾಗಿ ಹೇಳುವ ಮಾತಿನ ಮರ್ಮವೇ ಈ ನಿರೂಪಣಾ ಕಲೆ, ಇಂದು ಆಕಾಶವಾಣಿ, ದೂರದರ್ಶನಗಳಲ್ಲಿ ಭಾವಶೈಲಿಯಲ್ಲಿ ಭಿತ್ತರಗೊಂಡು ಶೋತೃಗಳಿಗೆ ಆ ಭಾಷೆ ಶೈಲಿಯ ಧ್ವನಿಯ ಹದದ ಬಗ್ಗೆ ಕೇಳುತ್ತ ನಾವು ಆಕರ್ಷಣೆಗೊಳ್ಳುತ್ತೇವೆ. ಅಲ್ಲಿ ನಿರೂಪಕರಾದ ಈ ಕಲೆಯ
ಬಿತ್ತಣಿಗೆಗಾರರೇ ಸಭೆ ಸಮಾರಂಭಗಳಲ್ಲಿ ನಿರೂಪಣೆಗಾರರಾಗಿರುತ್ತಾರೆ. ಇಂಥವರಲ್ಲಿ ಶಿಕ್ಷಕಿ ಉಮಾದೇವಿ ನಮ್ಮ ನಿಮ್ಮ ನಡುವಿನ ಸಾಧಕಿ.
ಸಕಲೇಶಪುರ ತಾಲ್ಲೂಕಿನ ಅನೇಮಹಲ್ ಶಾಲೆಯ ಶಿಕ್ಷಕಿ ಉಮಾದೇವಿ ಅವರಿಗೆ ರಾಜ್ಯಮಟ್ಟದ ‘ಅಕ್ಷರದವ್ವ ಸಾವಿತ್ರಿಬಾಯಿ ಫುಲೆ-2023’ ಪ್ರಶಸ್ತಿ ದೊರೆತಿದೆ. ಕರ್ನಾಟಕ ದಲಿತ ವಿದ್ಯಾರ್ಥಿ ಪರಿಷತ್ ಕೊಡಮಾಡುತ್ತಿರುವ ಈ ಪ್ರಶಸ್ತಿ ಪ್ರದಾನ ಸಮಾರಂಭವು ಜ.3ರಂದು ವಿಜಯಪುರದ ರಂಗಮಂದಿರದಲ್ಲಿ ನಡೆಯಲಿದ್ದು ನಾಡಿನ ವಿವಿಧ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ರಾಯಚೂರು ಜಿಲ್ಲೆಯ ರಾಮಪುರ ಗ್ರಾಮದ ಶ್ರೀ ಇ.ಎನ್. ವೀರಭದ್ರಪ್ಪ ಶ್ರೀಮತಿ ಮಹದೇವಮ್ಮನವರ ಪುತ್ರಿಯಾಗಿ ಜನಿಸಿದ ಉಮಾದೇವಿಯವರು,ಒಂದರಿಂದ 10ನೇ ತರಗತಿವರೆಗೆ ಉತ್ತರ ಕರ್ನಾಟಕದ ರಾಯಚೂರು,ಬಳ್ಳಾರಿ ಜಿಲ್ಲೆಯಲ್ಲಿ ವಿದ್ಯಾಭ್ಯಾಸ ನಡೆಸಿದರು,ನಂತರ 1988 ರಲ್ಲಿ ಗುಲ್ಬರ್ಗ ಜಿಲ್ಲೆಯ ಲಕ್ಷ್ಮಣ್ ಮುಂಡಾಸ್ ರವರೊಂದಿಗೆ ವಿವಾಹವಾಗಿ, ಲಕ್ಷ್ಮಣ್ ಮುಂಡಾಸ್ ರವರು ಸಕಲೇಶಪುರದ ಈಗಿನ ಸೆಂಟ್ ಆಗ್ನೆಸ್ ಶಾಲೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದರು ಹಾಗಾಗಿ ಮದುವೆ ನಂತರ ದಂಪತಿಗಳು ಸಕಲೇಶಪುರದಲ್ಲಿ ನೆಲೆಸಿದರು.ಉಮಾದೇವಿಯವರು ನಂತರ ಪತಿಯ ಸಹಕಾರದಿಂದ ವಿದ್ಯಾಭ್ಯಾಸವನ್ನು ಮುಂದುವರಿಸಿ,ಸಕಲೇಶಪುರದ ಗೌತಮ ಕಾಲೇಜು ಕುಡುಗರಹಳ್ಳಿಯ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪಡೆದು ನಂತರ ಎಂಎ ಪದವಿಯನ್ನು ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಪಡೆದುಕೊಂಡು,ಮೈಸೂರಿನಲ್ಲಿ ಡಿಪ್ಲೋಮೋಇನ್ ಜನರಲಿಸಂ ಕೂಡ ಮುಗಿಸಿ ಸಕಲೇಶಪುರ ತಾಲೂಕಿನ ಆನೆಮಹಲ್ ಗ್ರಾಮ ಪಂಚಾಯಿತಿಯ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ 22 ವರ್ಷಗಳಗಳಿಂದ ಸೇವೆ ಮುಂದುವರೆದಿದೆ.
ಶಾಲೆಯಲ್ಲಿ ಮಕ್ಕಳ ವಯಸ್ಸಿಗನುಗುಣವಾಗಿ ಸಂತಸ
ಕಲಿಕೆ ಆಗುವಂತೆ ಉತ್ತಮ ಪಾಠಭೋದನೆ ಹಾಗೂ ಪಾಠೋಪಕರಣಗಳ ತಯಾರಿಕ ಮಾಡುವುದು,ಮಕ್ಕಳನ್ನು ಪತ್ಯೇತರ ಚಟುವಟಿಕೆಗಳಲ್ಲಿ ಭಾಗಹಿಸುವಂತೆ ಮಾಡಿ ಮನ್ನಣೆ ಗಳಿಸಿರುತ್ತಾರೆ. ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಗಳು..ಚರ್ಚಾ ಸ್ಪರ್ಧೆಗಳು..ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಗಳಲ್ಲಿ ಮಕ್ಕಳನ್ನು ಸಜ್ಜುಗೊಳಿಸಿ ತಾಲೂಕು ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ದೊರೆಯುವಂತೆ ಮಾಡಿದ್ದಾರೆ.ಮಕ್ಕಳಿಗೆ ಮೂಲಭೂತವಾಗಿ ಬೇಕಾಗುವಂತ ವಸ್ತುಗಳು ತಾವೇ ಖರೀದಿ ಮಾಡಿ ನೀಡುತ್ತಿದ್ದರು. ಕರೋನ ವೈರಸ್ ಹರಡಿದ ಸಂದರ್ಭದಲ್ಲಿ ವಿಶೇಷ ರೀತಿಯಲ್ಲಿ ಮಕ್ಕಳನ್ನು ಸ್ವಚ್ಛತೆಯಡೆಗೆ ಪ್ರೇರೇಪಿಸಿ ಸಜ್ಜುಗೊಳಿಸಿದ್ದು ಪ್ರಶಂಸೆಗೆ ಪಾತ್ರವಾಗಿತ್ತು.
ಇವರ ಸೇವೆಯನ್ನು ಗುರುತಿಸಿ ಈಗಾಗಲೇ ಇವರಿಗೆ ಹಲವು ಪ್ರಶಸ್ತಿಗಳು ಸಹ ಬಂದಿವೆ, ಶಿಕ್ಷಕಿಯಾಗಿ ಜೊತೆ ಜೊತೆಗೆ ಕತೆ ಕವಿತೆ ಬರೆಯುತ್ತಾ, ಸುಮಧುರವಾದ ಕಂಠಸಿರಿ ವಿದ್ವತ್ಪೂರ್ಣ ವಾಕ್ಯ ರಚನೆಗಳ ಸರಮಾಲೆಗಳಿಂದ ಕೂಡಿದ ಭಾಷೆಯ ಸೊಗಸಿನ ವಿವರಣೆ ಎಂತವರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.ಬಹು ಜನಪ್ರಿಯ ನಿರೂಪಕರಿನಿಸಿಕೊಂಡು ರಾಷ್ಟ್ರೀಯ ಹಬ್ಬಗಳ ಆಚರಣಾ ಕಾರ್ಯಕ್ರಮಗಳು,ಸಾಂಸ್ಕೃತಿಕ ಕಾರ್ಯಕ್ರಮಗಳು, ದೇವಸ್ಥಾನದ ಉದ್ಘಾಟನೆಗಳು,ಸಾಹಿತ್ಯ ಸಮ್ಮೇಳನಗಳಲ್ಲಿ ಹೀಗೆ ಐದು ನೂರಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಶ್ರೇಷ್ಠ ಮಟ್ಟದ ನಿರೂಪಣೆ ಮಾಡುತ್ತಾ ಗ್ರಾಮ, ತಾಲೂಕು, ಜಿಲ್ಲೆ, ರಾಜ್ಯ ಮಟ್ಟದ ಖ್ಯಾತ ನಿರೂಪಣೆ ಗುರುತಿಸುವಂತೆ ಮಾಡಿದೆ.
ಹಲವಾರು ಪ್ರಶಸ್ತಿ ಅಭಿನಂದನಾ ಪತ್ರ ಪಡೆದು ಜನ ಮನ್ನಣೆ ಗಳಿಸಿರುವ ಉಮಾದೇವಿ ಅವರ ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ ಸಾವಿತ್ರಿ ಬಾಯಿಪುಲೆ-2023ರ ರಾಜ್ಯ ಪ್ರಶಸ್ತಿ ನೀಡುತ್ತಿರುವುದು ಸಕಲೇಶಪುರಕ್ಕೆ ಸಂಧ ಗೌರವವಾಗಿದೆ. ಶಿಕ್ಷಣ ಇಲಾಖೆಯಲ್ಲಿ ಇನ್ನು ಏಳು ವರ್ಷದ ಸೇವೆ ಇದೆ ಹೆಚ್ಚಿನ ರೀತಿಯ ಶಿಕ್ಷಕಿ,ಸಾಹಿತ್ಯ ಸೇವೆಯ ನಿರೂಪಣೆ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ದೊರೆಯಲಿ ರಾಷ್ಟ್ರಮಟ್ಟದವರೆಗೂ ತಮ್ಮ ಪ್ರತಿಭೆ ಬೆಳಗಲಿ ಎಂದು ಆಶಿಸುವ.
*ನಿರೂಪಕಿಯಾಗಿ.*
ರಾಷ್ಟ್ರೀಯ ಹಬ್ಬಗಳ ಕಾರ್ಯಕ್ರಮದಲ್ಲಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಾಸನ ಇವರು ನಡೆಸಿದ ಕಾರ್ಯಕ್ರಮಗಳಲ್ಲಿ.ಕೃಷಿ ಇಲಾಖೆ ನಡೆಸುವ ಕೃಷಿ ಉತ್ಸವದಲ್ಲಿ,ರಾಜಕೀಯ ಕಾರ್ಯಕ್ರಮಗಳಲ್ಲಿ,ಕರ್ನಾಟಕ ರಕ್ಷಣಾ ವೇದಿಕೆ ನಡೆಸುವ ಕಾರ್ಯಕ್ರಮಗಳು, ಅಖಿಲ ಭೌರತ ಕನ್ನಡ ಸಾಹಿತ್ಯ ಕಾರ್ಯಕ್ರಮ ಯಶಸ್ವಿ ಕಾರ್ಯ.
*ಉಪನ್ಯಾಸಕಿಯಾಗಿ.*
1. ಮಹಿಳಾ ಜಾಗೃತಿ ಕಾರ್ಯಕ್ರಮಗಳಲ್ಲಿ
2. ಜೆ.ಎಸ್.ಎಸ್ ಬಿ.ಎಡ್, ಡಿ.ಎಡ್ ಮತ್ತು ನರ್ಸಿಂಗ್ ಕಾಲೇಜ್ ಇವರು ನಡೆಸಿರುವ ಹಲವು ಕಾರ್ಯಕ್ರಮಗಳಲ್ಲಿ
3. ಅರಸೀಕೆರೆ ಡಿ.ಎಡ್ ಕಾಲೇಜ್
4. ಚಿತ್ರದುರ್ಗ ಜಿಲ್ಲೆ ಅನ್ನಪೂರ್ಣೇಶ್ವರಿ ಅಬಲಾಶ್ರಮದ ಕಾರ್ಯಕ್ರಮದಲ್ಲಿ.. ಮನಮುಟ್ಟುವ ಉಪನ್ಯಾಸ ನೀಡಿ ವಿದ್ಯಾರ್ಥಿಗಳ ಮತ್ತು ಶಿಕ್ಷಣ ಇಲಾಖೆಯ ಹಾಗುರಾಜ್ಯದ ಗಮನ ಸೆಳೆದಿದ್ದಾರೆ.
ಸಾಮಾಜಿಕ ಸಮಸ್ಯೆಗಳು ಎಂಬ ಕೃತಿ ಬಿ.ಎ ವಿದ್ಯಾರ್ಥಿಗಳಿಗಾಗಿ. ಸಾಮಾಜಿಕ ಸಮಸ್ಯೆಗಳು ಮತ್ತು ಪರಿಹಾರಗಳು ಕರ್ನಾಟಕದ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳಿಗಾಗಿ ಮತ್ತು ಸರ್ಧಾತ್ಮಕ ಪರೀಕ್ಷೆಗಳಿಗಾಗಿ ಉಪಯುಕ್ತವಾದ ಕೃತಿ ಎಂದು ಮನ್ನಣೆ ಗಳಿಸಿದೆ.
2010ರಲ್ಲಿ ಹಾಸನ ಆಕಾಶವಾಣಿಯಲ್ಲಿ ಬಹುಮುಖ ಪ್ರತಿಭೆ ಗುರುತಿಸಿ ಸಂದರ್ಸಿಸಲಾಗಿದೆ.
*ಪ್ರಶಸ್ತಿಗಳು* .
* 2010 ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕರವೇ ಡಾ. ರಾಜ್ ಸಂಘದ ಅತ್ಯುತ್ತಮ ನಿರೂಪಕಿ ಪ್ರಶಸ್ತಿ.
*2017ಸಕಲೇಶಪುರ ಗಣರಾಜ್ಯೋತ್ಸವ ಪ್ರಶಸ್ತಿ.
* 2017 ಸತ್ಯಪ್ರಭ ಪತ್ರಿಕೆಯ ಅತ್ಯುತ್ತಮ ಶೈಕ್ಷಣಿಕ ಸಾಧನೆ ಪ್ರಶಸ್ತಿ.
* 2022/23 ರ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ
ಯಡೇಹಳ್ಳಿ”ಆರ್”ಮಂಜುನಾಥ್.
9901606220