ಕನಸಿನ ಮನೆ ಗೃಹಪ್ರವೇಶ ಮಾಡುವ ಮುನ್ನವೇ ಅಪಘಾತದಲ್ಲಿ ಮೃತಪಟ್ಟ ಟ್ಯಾಟು ಆರ್ಟಿಸ್ಟ್
ಸಕಲೇಶಪುರ: ಕಷ್ಟದಿಂದ ಹಂತ ಹಂತವಾಗಿ ಬದುಕಿನಲ್ಲಿ ಮೇಲೆರಿದ್ದ ಯುವಕ ತನ್ನ ಕನಸಿನ ಮನೆ ಗೃಹಪ್ರವೇಶ ಮಾಡುವ ಮುನ್ನವೇ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಹೊಸ ವರ್ಷದ ಮೊದಲ ದಿನವೇ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಕಾಕನಮನೆ ಸಮೀಪದ ಅಭಿಷೇಕ್ ಶಾಲಿಯಾನ್ (28) ಹೊಸ ವರ್ಷದ ಮೊದಲ ದಿನವೇ ಅಪಘಾತದಲ್ಲಿ ಮೃತಪಟ್ಟ ದುರ್ದೈವಿಯಾಗಿದ್ದಾನೆ. ಸ್ನೇಹಿತರ ಜೊತೆ ಹಾನುಬಾಳ್ ಸಮೀಪ ಹೊಸವರ್ಷ ಆಚರಣೆ ಮಾಡಿಕೊಂಡು ಭಾನುವಾರ ಬೆಳಿಗ್ಗೆ ತನ್ನ ಮನೆಗೆ ಕಾರಿನಲ್ಲಿ ಹಿಂತಿರುಗಿ ಬರುತ್ತಿದ್ದರು ಎಂದು ಹೇಳಲಾಗಿದ್ದು ವಿಪರೀತ ಇಬ್ಬನಿಯಿಂದಾಗಿ ಎದುರುಗಡೆಯಿಂದ ಕೆ.ಎಸ್.ಆರ್.ಟಿ.ಸಿ ಬಸ್ ಗೆ ಕಾರು ಮುಖಾಮುಖಿ ಡಿಕ್ಕಿಯಾಗಿ ಗಂಭೀರ ಗಾಯಗೊಂಡ ಅಭಿಷೇಕ್ ಫಟ್ಟಣದ ಕ್ರಾಫರ್ಡ್ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ದರು ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪಟ್ಡಣದಲ್ಲಿ ಟ್ಯಾಟು ಆರ್ಟಿಸ್ಟ್ ಆಗಿ ಯುವ ಜನಾಂಗದ ಕಣ್ಮಣಿಯಾಗಿದ್ದ ಅಭಿಷೇಕ್ ಹಂತ ಹಂತವಾಗಿ ಮೇಲೇರಿ ಗ್ರಾಮದಲ್ಲಿ ಕನಸಿನ ಮನೆಯನ್ನು ಕಟ್ಟುತ್ರಿದ್ದರು.ಶೇ.90 ರಷ್ಟು ಮನೆ ಕೆಲಸ ಮುಗಿದಿದ್ದು ಕನಸಿನ ಮನೆಯ ಗೃಹಪ್ರವೇಶ ಮಾಡುವ ಮುನ್ನವೇ ಅಭಿಷೇಕ್ ಮೃತಪಟ್ಟಿರುವುದು ಕುಟುಂಬದವರನ್ನು ದುಃಖದ ಮಡಿಲಲ್ಲಿ ಇರುವಂತೆ ಮಾಡಿದೆ