ಬಸ್ಸಿನಲ್ಲಿ ಮೊಬೈಲ್ ಕಳೆದುಕೊಂಡ ನಿರ್ವಾಹಕ: ಪ್ರಯಾಣಿಕರನ್ನು ಇಳಿಸಿ ತಪಾಸಣೆ: ದೊರಕದ ಮೊಬೈಲ್
ಸಕಲೇಶಪುರ: ಕಾಡುಮನೆಯಿಂದ ಸಕಲೇಶಪುರ ಕಡೆಗೆ ಬರುತ್ತಿದ್ದ ಬಸ್ಸೊಂದರ ನಿರ್ವಾಹಕ ಮೊಬೈಲ್ ಕಳೆದುಕೊಂಡ ಹಿನ್ನೆಲೆಯಲ್ಲಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು ಪೋಲಿಸರು ಬಸ್ಸ್ ನಲ್ಲಿದ್ದ ಪ್ರಯಾಣಿಕರನ್ನು ತಪಾಸಣೆ ಮಾಡಿದರು ಮೊಬೈಲ್ ದೊರಕಿಲ್ಲ.ಬಸ್ ನಲ್ಲಿ ಬಹುತೇಕವಾಗಿ ವಿದ್ಯಾರ್ಥಿಗಳೆ ತುಂಬಿ ತುಳುಕುತ್ತಿದ್ದರು.ಒಟ್ಟಾರೆಯಾಗಿ ನಿರ್ವಾಹಕನ ನಿರ್ಲಕ್ಷ್ಯದಿಂದ ಮೊಬೈಲ್ ಕಳೆದು ಹೋಗಿದ್ದು ವಿನಾಕಾರಣ ಬಸ್ಸ್ ನಲ್ಲಿದ್ದವರು ಪೋಲಿಸರ ತಪಾಸಣೆಗೆ ಒಳಗಾಗಬೇಕಾಯಿತು.