Sunday, March 16, 2025
Homeಸುದ್ದಿಗಳುಸಕಲೇಶಪುರ : ಇಂದಿನಿಂದ ಹೆತ್ತೂರು ಹೋಬಳಿ ವ್ಯಾಪ್ತಿಯ ರೋಗಿಗಳ ತುರ್ತು ಚಿಕಿತ್ಸೆಗೆ ಆಂಬುಲೆನ್ಸ್ ಲಭ್ಯ.ಅಂತು ಇಂತು...

ಸಕಲೇಶಪುರ : ಇಂದಿನಿಂದ ಹೆತ್ತೂರು ಹೋಬಳಿ ವ್ಯಾಪ್ತಿಯ ರೋಗಿಗಳ ತುರ್ತು ಚಿಕಿತ್ಸೆಗೆ ಆಂಬುಲೆನ್ಸ್ ಲಭ್ಯ.ಅಂತು ಇಂತು ಬಂತು ಆಂಬುಲೆನ್ಸ್ 

ಸಕಲೇಶಪುರ : ಇಂದಿನಿಂದ ಹೆತ್ತೂರು ಹೋಬಳಿ ವ್ಯಾಪ್ತಿಯ ರೋಗಿಗಳ ತುರ್ತು ಚಿಕಿತ್ಸೆಗೆ ಆಂಬುಲೆನ್ಸ್ ಲಭ್ಯ.ಅಂತು ಇಂತು ಬಂತು ಆಂಬುಲೆನ್ಸ್

 

ತಾಲೂಕಿನ ಹೆತ್ತೂರು ಹೋಬಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಂಬುಲೆನ್ಸ್ ಇಲ್ಲದೆ ರೋಗಿಗಳು ಪರದಾಡುವಂತಾಗಿತ್ತು . ಕಳೆದ ಒಂದು ವಾರದ ಹಿಂದೆ ದೊಡ್ಡ ಕಲ್ಲೂರು ಗ್ರಾಮದ ರೋಷನ್ ಎಂಬ ಬಾಲಕ ಅಂಗನವಾಡಿ ಮುಂಭಾಗ ಹಾವು ಕಡಿತದಿಂದ ಸಾವನ್ನಪ್ಪುವುದಕ್ಕೆ ಸೂಕ್ತ ಸಮಯದಲ್ಲಿ ಆಂಬುಲೆನ್ಸ್ ಸೇವೆ ಸಿಗದೇ ಇರುವುದು ಕಾರಣ ಎಂಬ ಆರೋಪ ಕೇಳಿ ಬಂದಿತ್ತು.

 

 

ಈ ಹಿನ್ನಲೆಯಲ್ಲಿ ಶಾಸಕ ಎಚ್ ಕೆ ಕುಮಾರಸ್ವಾಮಿ ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆಸಿದ ಫಲವಾಗಿ ನೆನ್ನೆ ರಾತ್ರಿ 11:30 ಸಮಯದಿಂದ ಹೆತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 108 ತುರ್ತು ಚಿಕಿತ್ಸೆ ವಾಹನವನ್ನು ನೀಡಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಮಹೇಶ್ ವಾಸ್ತವ ನ್ಯೂಸ್ ಗೆ ತಿಳಿಸಿದ್ದಾರೆ.

ಇದೇ ಸಂಧರ್ಭದಲ್ಲಿ ಮಾತನಾಡಿ ಮುಂದಿನ ದಿನಗಳಲ್ಲಿ ಮಾರನಹಳ್ಳಿ,ಹಾನುಬಾಳ್ ಹಾಗೂ ಬಾಳ್ಳುಪೇಟೆ ಆರೋಗ್ಯಕ್ಕೆ ಕೇಂದ್ರಗಳಿಗೆ ಆಂಬುಲೆನ್ಸ್ ಸೇವೆ ಒದಗಿಸಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ ಎಂದು ತಿಳಿಸಿದರು

RELATED ARTICLES
- Advertisment -spot_img

Most Popular