Friday, March 21, 2025
Homeಸುದ್ದಿಗಳುಪುರಸಭೆಯ ಬೀದಿ ದೀಪ ಅಳವಡಿಕೆಯಲ್ಲಿ ಬ್ರಹ್ಮಾಂಡ ಭ್ರಷ್ಟಚಾರ: ಪುರಸಭಾ ನಾಮನಿರ್ದೇಶಿತ ಸದಸ್ಯ ಉಮೇಶ್ ಆರೋಪ

ಪುರಸಭೆಯ ಬೀದಿ ದೀಪ ಅಳವಡಿಕೆಯಲ್ಲಿ ಬ್ರಹ್ಮಾಂಡ ಭ್ರಷ್ಟಚಾರ: ಪುರಸಭಾ ನಾಮನಿರ್ದೇಶಿತ ಸದಸ್ಯ ಉಮೇಶ್ ಆರೋಪ

ಪುರಸಭೆಯ ಬೀದಿ ದೀಪ ಅಳವಡಿಕೆಯಲ್ಲಿ ಬ್ರಹ್ಮಾಂಡ ಭ್ರಷ್ಟಚಾರ: ಪುರಸಭಾ ನಾಮನಿರ್ದೇಶಿತ ಸದಸ್ಯ ಉಮೇಶ್ ಆರೋಪ

ಸಕಲೇಶಪುರ: ಪಟ್ಟಣದಲ್ಲಿ ಪುರಸಭೆ ವತಿಯಿಂದ ಕೈಗೊಳ್ಳಲಾಗಿರುವ ಬೀದಿ ದೀಪಗಳ ಅಳವಡಿಕೆಯಲ್ಲಿ ಬ್ರಹ್ಮಾಂಡ ಭ್ರಷ್ಟಚಾರ ನಡೆದಿದೆ ಎಂದು ಪುರಸಭಾ ನಾಮ ನಿರ್ದೇಶಿತ ಸದಸ್ಯ ಉಮೇಶ್ ಆರೋಪಿಸಿದ್ದಾರೆ.

ಪಟ್ಟಣದಲ್ಲಿ ವಾಸ್ತವ ನ್ಯೂಸ್ ನೊಂದಿಗೆ ಮಾತನಾಡಿ ಸಕಲೇಶಪುರ ಪುರಸಭಾ ವ್ಯಾಪ್ತಿಯಲ್ಲಿ, ವಿದ್ಯುತ್ ದೀಪಗಳನ್ನು ಅಳವಡಿಸುವುದಕ್ಕೆ ಸುಮಾರು ಅಂದಾಜು ವೆಚ್ಚ ರೂ.14.80 ಲಕ್ಷಗಳಿಗೆ ಪುರಸಭೆಯಿಂದ ಟೆಂಡರ್ ಕರೆದಿದ್ದು, ಸದರಿ ಟೆಂಡರ್ನಲ್ಲಿ ಶ್ರೀ ಶಾರದಾ ಎಲೆಕ್ಟ್ರಿಕಲ್ಸ್ರವರು ಕಡಿಮೆ ದರವನ್ನು ನಮೂದಿಸಿದಿರುವುದರಿಂದ ಸದರಿಯವರಿಗೆ ಕಾರ್ಯಾದೇಶ ನೀಡಿ ವಿದ್ಯುತ್ ದೀಪ ಅಳವಡಿಸಲು ಸೂಚಿಸಲಾಗಿದೆ. ಆದರೆ ಗುತ್ತಿಗೆದಾರರು ಅತೀ ಕಳಪೆ ಮಟ್ಟದ ಬೀದಿ ದೀಪಗಳನ್ನು ಅಳವಡಿಸಿ ಸುಂದರವಾದ ಸಕಲೇಶಪುರ ಪಟ್ಟಣವನ್ನು ರಾತ್ರಿ ಸಮಯದಲ್ಲಿ ಕತ್ತಲು ಆವರಿಸುವಂತೆ ಮಾಡಿರುತ್ತಾರೆ. ಆದ್ದರಿಂದ ಗುತ್ತಿಗೆದಾರರಿಗೆ ಯಾವುದೇ ಕಾರಣಕ್ಕೂ ಬೀದಿ ದೀಪದ ಬಿಲ್ಲನ್ನು ನೀಡಬಾರದೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇವೆ. ಕಾನೂನು ಮೀರಿ ಬಿಲ್ಲನ್ನು ಪಾವತಿಸಿವುದು ಕಂಡುಬಂದಲ್ಲಿ ಪ್ರಗತಿಪರ ಸಂಘಟನೆಗಳೊಂದಿಗೆ ಪುರಸಭೆಯ ಮುಂಭಾಗ ಧರಣಿ ಮಾಡಲಾಗುವುದು ಎಂದಿದ್ದಾರೆ.

RELATED ARTICLES
- Advertisment -spot_img

Most Popular