Thursday, September 18, 2025
Homeಸುದ್ದಿಗಳುಯಸಳೂರು ಭಯ ತೊಲಗಿಸಲು ಪೊಲೀಸ್ ಇಲಾಖೆಯಿಂದ ‘ತೆರೆದ ಮನೆ’ ಪಾಠ.

ಯಸಳೂರು ಭಯ ತೊಲಗಿಸಲು ಪೊಲೀಸ್ ಇಲಾಖೆಯಿಂದ ‘ತೆರೆದ ಮನೆ’ ಪಾಠ.

ಯಸಳೂರು ಭಯ ತೊಲಗಿಸಲು ಪೊಲೀಸ್ ಇಲಾಖೆಯಿಂದ ‘ತೆರೆದ ಮನೆ’ ಪಾಠ.

ಕೈಗೆ ಬೇಡಿ ಏಕೆ ಹಾಕ್ತಾರೆ, ಮಕ್ಕಳನ್ನು ಜೈಲಿನಲ್ಲಿ ಇಟ್ಟುಕೊಳ್ಳುವು ದಿಲ್ಲವೇ, ಪಿಸ್ತೂಲ್‌ ಯಾವಾಗ ಬಳಸು ತ್ತೀರಾ, ಕಳ್ಳರು ಹಿಡಿದು ಏನ್‌ ಮಾಡುತ್ತೀರಾ..’

–ಇದು ಪೊಲೀಸ್‌ ಇಲಾಖೆಯ ‘ತೆರೆದ ಮನೆ’ ಕಾರ್ಯಕ್ರಮದ ಅಂಗ ವಾಗಿ ಶಾಲಾ ಮಕ್ಕಳು ಠಾಣೆಗೆ ಭೇಟಿ ನೀಡಿದಾಗ ಕುತೂಹಲದ ಪ್ರಶ್ನೆಗಳನ್ನು ಠಾಣಾಧಿಕಾರಿಗೆ ಕೇಳಿ ಗೊಂದಲ ನಿವಾರಿಸಿಕೊಳ್ಳುತ್ತಿದ್ದರು.

ಪೊಲೀಸ್ ಎಂದರೆ ಸಾಮಾನ್ಯವಾಗಿ ಮಕ್ಕಳು ಭಯ ಪಡುವುದು ಸಹಜ. ಭಯ ತೊಲಗಿಸಿ, ಮಕ್ಕಳು ತಮ್ಮ ಹಕ್ಕುಗಳಿಗೆ ಚ್ಯುತಿ ಬಂದಾಗ ಮತ್ತು ರಕ್ಷಣೆ ಅವಶ್ಯವೆನಿಸಿದಾಗ ಪೊಲೀಸ್‌ ಸಹಾಯ ಪಡೆಯಲು ಮಕ್ಕಳ ಸ್ನೇಹಿ ವಾತಾವರಣ ಸೃಷ್ಠಿಸಲು ‘ತೆರೆದ ಮನೆ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪಿಎಸ್ಐ ಕಸ್ತೂರಿ ಹೇಳಿದರು.

ಯಸಳೂರು ಠಾಣಾ ವ್ಯಾಪ್ತಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಪೊಲೀಸ್ ಠಾಣೆಯ ಆಡಳಿತ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪೊಲೀಸರೆಂದರೆ ಹೆದರುತ್ತಿದ್ದ ಮಕ್ಕಳು ಈಗ ಧೈರ್ಯವಾಗಿ ಮಾತ ನಾಡುತ್ತಾರೆ. ಬಾಲ್ಯ ವಿವಾಹ ಮಾಡಲು ಮುಂದಾದರೆ ಏನು ಮಾಡ ಬೇಕು, ಪೋಷಕರು–ಶಿಕ್ಷಕರು ಹೊಡೆ ಯುತ್ತಾರೆ, ಶಾಲೆಗಳ ಬಳಿ ಕಿಡಿಗೇಡಿಗಳು ರೇಗಿಸು ತ್ತಾರೆ, ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ, ಅತ್ಯಾಚಾರ ತಡೆ ಯಲು ಏಕೆ ಆಗುತ್ತಿಲ್ಲ ಎಂಬ ಪ್ರಶ್ನೆಗಳನ್ನು ಕೇಳುತ್ತಾರೆ. ಮಕ್ಕಳಿಗೆ ಕಾನೂನಿನ ಬಗ್ಗೆ ಅರಿವು ಮೂಡಿ ಸುವುದರ ಜತೆಗೆ ಯಾವುದನ್ನು ಮಾಡಬೇಕು, ಮಾಡ ಬಾರದು ಎಂಬುದರ ತಿಳುವಳಿಕೆ ನೀಡಲಾಗುತ್ತದೆ’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು ಠಾಣೆಯ ಸಿಬ್ಬಂದಿಗಳು ಹಾಜರಿದ್ದರು.

RELATED ARTICLES
- Advertisment -spot_img

Most Popular