ಅಂಗನವಾಡಿ ಕೇಂದ್ರ ಆವರಣದಲ್ಲಿ ಹಾವು ಕಡಿತದಿಂದ ಬಾಲಕ ಸಾವು
ಯಸಳೂರು ಹೋಬಳಿಯಲ್ಲಿ ಹೃದಯವಿದ್ರಾವಕ ಘಟನೆ
ಸಕಲೇಶಪುರ ತಾಲೂಕು ಯಸಳೂರು ಹೋಬಳಿಯ ದೊಡ್ಡ ಕಲ್ಲೂರು ಗ್ರಾಮದ ಗೌರಿ ಮತ್ತು ಯಶ್ವಂತ್ ಅವರ ಮಗನಾದ ರೋಹನ್ ಗೆ ದೊಡ್ಡ ಕಲ್ಲೂರಿನ ಅಂಗನವಾಡಿ ಕೇಂದ್ರ ಆವರಣದಲ್ಲಿ ಕೊಳಕುಮಂಡಲ ಹಾವು ಬಾಲಕನಿಗೆ ಕಡಿದಿದೆ.
ನಾವು ಬೆಳಗ್ಗೆ 9:45 ರಿಂದ 10 ಗಂಟೆಯ ಒಳಗೆ ಅಂಗನವಾಡಿ ಕೇಂದ್ರದ ಬಾಗಿಲು ತೆಗೆಯುತ್ತೇವೆ ಆದರೆ ಬಾಲಕನ ಪೋಷಕರು ಅವರ ಕೆಲಸದ ನಿಮಿತ್ತ ಅಂಗನವಾಡಿಯ ಬಾಗಿಲು ತೆಗೆಯುವ ಮೊದಲೇ ಅಂಗನವಾಡಿಯ ಹತ್ತಿರ ಬಾಲಕನನ್ನು ತಂದು ಬಿಟ್ಟಿರುತ್ತಾರೆ ಅಂಗನವಾಡಿ ಆವರಣದಲ್ಲಿ ಆಟ ಆಡುವಾಗ ಬಾಲಕ ಹಾವನ್ನು ಮುಟ್ಟಿದಾಗ ಹಾವು ಕಚ್ಚಿದೆ. ನಾನು ಈ ದಿನ ರಜೆ ಹಾಕಿರುತ್ತೇನೆ ಆದರೆ ಅಂಗನವಾಡಿ ಆಯ ಗ್ರಾಮದ ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕರೆತರಲು ಮನೆಗಳಿಗೆ ಹೋಗಿದ್ದಾಗ ಈ ಅವಘಡ ಸಂಭವಿಸಿದೆ ಎಂದು ಅಂಗನವಾಡಿ ಕಾರ್ಯಕರ್ತೆ ಮಾಹಿತಿ ನೀಡಿದ್ದಾರೆ.
ತಕ್ಷಣ ಸಕಲೇಶಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು. ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆ ಹಾಸನ ಕ್ಕೆ ಕಳಿಸಲಾಗಿದೆ ಎಂದು ತಿಳಿಸಿದರು.