ವಳಲಹಳ್ಳಿ ಗ್ರಾಪಂ ಯಲ್ಲಿ ಅರ್ಥಪೂರ್ಣ ರೈತ ದಿನಾಚರಣೆ .
ಕಿಸಾನ್ ಗೋಷ್ಠಿ ಆಯೋಜನೆ
ಸಕಲೇಶಪುರ : ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರ ಹೆತ್ತೂರು ವತಿಯಿಂದ ರೈತರ ದಿನಾಚರಣೆ ಅಂಗವಾಗಿ ಕಿಸಾನ್ ಗೋಷ್ಠಿ ಕಾರ್ಯಕ್ರಮ ಏರ್ಪಾಡಿಸಲಾಗಿತ್ತು
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗ್ರಾಮ ಪಂಚಾಯತಿ ಅಧ್ಯಕ್ಷ ಬೊಮ್ಮನಕೇರೆ ರೇಣು ಕುಮಾರ್ , ಮಾಜಿ ಪ್ರಧಾನಿ ಚೌದರಿ ಚರಣ್ ಸಿಂಗ್ ಚೌಧರಿ ಇವರು ಮೀರತ್ ನೂರ್ಪುರ್ ನಲ್ಲಿ 1902ರ ಡಿಸೆಂಬರ್ 23ರಂದು ಜನಿಸಿದರು. ಕೃಷಿ ಆರ್ಥಿಕತೆಯ ಮಹತ್ವವನ್ನು ಅವರು ಅರಿತು ದೇಶದ ರೈತರ ಪರಿಸ್ಥಿತಿಯನ್ನು ಗುರುತಿಸಿ ಅದಕ್ಕೆ ಪೂರಕವಾದ ಯೋಜನೆಗಳನ್ನು ತಂದಿದ್ದರು.
ಡಿಸೆಂಬರ್ 23ನ್ನು ರಾಷ್ಟ್ರೀಯ ರೈತರ ದಿನ ಅಥವಾ ಕಿಸಾನ್ ದಿವಸ್ ಎಂದು ದೇಶದೆಲ್ಲೆಡೆ ಆಚರಿಸಲಾಗುತ್ತದೆ ಎಂದರು.
ರೈತರಿಗೆ ಕೃಷಿಗೆ ಸಂಬಂಧಪಟ್ಟ ಸರ್ಕಾರದ ಯೋಜನೆ ಹಾಗೂ ರೈತರು ಹೇಗೆ ಅದನ್ನು ಪಡೆದು ಕೊಳ್ಳಬೇಕು ಎಂಬ ಮಾಹಿತಿಯನ್ನು ಕಾರ್ಯಕ್ರಮಕ್ಕೆ ಬಂದ ವಿಶೇಷ ಅಧಿಕಾರಿಗಳು ವಿವರಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುರೇಶ್, ಹೆತ್ತೂರು ಹೋಬಳಿ ಕೃಷಿ ಅಧಿಕಾರಿ ಕೇಶವ್ ಮೂರ್ತಿ,ಕೆಡಿಪಿ ಸದಸ್ಯ ಮಧುಸೂದನ್,ಕಾಫಿ ಬೋರ್ಡ್ ಅಧಿಕಾರಿ ಶಕ್ತಿ,ಕೃಷಿ ಸಮಾಜ ಸದಸ್ಯ ಮಹೇಶ್,ಆತ್ಮ ಯೋಜನೆ ಸದಸ್ಯರಾದ ಸುಷ್ಮಾ ಭರತ್ ಗೌಡಹಾಗೂ ವಳಲಹಳ್ಳಿ ಗ್ರಾಮಪಂಚಾಯಿತಿ ಸದಸ್ಯರು ಭಾಗವಹಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರ ಭಾಗವಹಿಸಿ ಕಾರ್ಯಕ್ರಮದ ಉಪಯೋಗ ಪಡೆದುಕೊಂಡರು.