Tuesday, March 25, 2025
Homeಸುದ್ದಿಗಳುಚಂಗಡಿಹಳ್ಳಿ:. ಅಕ್ರಮ ಮದ್ಯ ಮಾರಾಟ; ಓರ್ವನ ಬಂಧನ

ಚಂಗಡಿಹಳ್ಳಿ:. ಅಕ್ರಮ ಮದ್ಯ ಮಾರಾಟ; ಓರ್ವನ ಬಂಧನ

ಚಂಗಡಿಹಳ್ಳಿ:. ಅಕ್ರಮ ಮದ್ಯ ಮಾರಾಟ; ಬಂಧನ

ಸಕಲೇಶಪುರ: ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸಿರುವ ಪ್ರಕರಣ ಚಂಗಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ವಾಸಿ ಜೀತೇಂದ್ರ ಬಂಧಿತ ಆರೋಪಿಯಾಗಿದ್ದು, ಶನಿವಾರಸಂತೆ ರಸ್ತೆಯಲ್ಲಿ ಚಿಲ್ಲರೆ ಅಂಗಡಿ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದು ಅಂಗಡಿಯಲ್ಲಿ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ಬಂದ ಮಾಹಿತಿ ಹಿನ್ನೆಲೆಯಲ್ಲಿ ಯಸಳೂರು ಪೊಲೀಸ್ ಠಾಣೆ ಪಿಎಸ್‌ಐ ನವೀನ್ ತಂಡ ಅಂಗಡಿ ಮೇಲೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ 4048ರೂ ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಾಗಿದೆ. ಯಸಳೂರು ಪೊಲೀಸ್ ಠಾಣಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -spot_img

Most Popular