ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಬಿಜೆಪಿಯಿಂದ ಮಾತ್ರ ಸಾಧ್ಯ – ಮಂಜುನಾಥ್ ಸಂಘಿ
ಆನೆ-ಮಾನವ ಸಂಘರ್ಷ: ಪರಿಹಾರ ದ್ವಿಗುಣಗೊಳಿಸಲು ಮುಖ್ಯಮಂತ್ರಿ ಸಮ್ಮತಿ ವಿಚಾರ
ಸಕಲೇಶಪುರ ಭಾಜಪಾ ಮಂಡಲದ ವತಿಯಿಂದ ಅಭಿನಂದನೆ ಸಲ್ಲಿಸಿದ ಮಂಜುನಾಥ್ ಸಂಘಿ
ಸಕಲೇಶಪುರ : ಮಲೆನಾಡು ಭಾಗದಲ್ಲಿ ಹತ್ತಾರು ವರ್ಷಗಳ ಸಮಸ್ಯೆಗಳಲ್ಲಿ ಮುಖ್ಯವಾಗಿ ಕಾಡಾನೆ ಸಮಸ್ಯೆಯನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ನಮ್ಮ ಸರ್ಕಾರ ದಿಟ್ಟ ಕ್ರಮಗಳನ್ನು ಕೈಗೊಂಡಿದೆ ಎಂದು ತಾಲೂಕು ಅಧ್ಯಕ್ಷ ಮಂಜುನಾಥ್ ಸಂಘಿ ಹೇಳಿದ್ದಾರೆ.
ರೈತರು ಬೆಳೆಗಾರರು ಹಾಗೂ ಸಾರ್ವಜನಿಕ ಪರವಾಗಿ ಮಹತ್ವದ ನಿರ್ಣಯ ಕೈಗೊಂಡ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಸಕಲೇಶಪುರ ಮಂಡಲದ ವತಿಯಿಂದ ಹಲವಾರು ಬಾರಿ ರಾಜ್ಯ ಸರ್ಕಾರಕ್ಕೆ ಕಾಡಾನೆ ಸಮಸ್ಯೆ ಹಾಗೂ ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಬಗ್ಗೆ ಮನವಿ ಸಲ್ಲಿಸಿದ್ದೆವು ಎಂದು ತಿಳಿಸಿದ್ದಾರೆ.