Big Breaking : ಕೌಕೋಡಿ – ಹೊಸರಳ್ಳಿ ಸಂಪರ್ಕ ಸೇತುವೆ ಕುಸಿತ
ಆತಂಕದಲ್ಲಿ ಗ್ರಾಮಸ್ಥರು||ಉದ್ಘಾಟನೆಗೊಂಡು ಮೂರೇ ವರ್ಷದಲ್ಲೇ ಸಂಪೂರ್ಣ ಸೇತುವೆ ಕೊಚ್ಚಿ ಹೋಗುವ ಸಾಧ್ಯತೆ.
ಸಕಲೇಶಪುರ : ತಾಲೂಕಿನ ಯಸಳೂರು ಹೋಬಳಿ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೌಕೋಡಿ – ಹೊಸರಳ್ಳಿ ಸಂಪರ್ಕ ಸೇತುವೆಯನ್ನು ಕಳೆದ ಮೂರು ವರ್ಷಗಳ ಹಿಂದೆ ಎತ್ತಿನಹೊಳೆ ಯೋಜನೆ ವತಿಯಿಂದ ನಿರ್ಮಿಸಲಾಗಿತ್ತು.
ಕಳೆದ ಬಾರಿಯ ಮಳೆಗಾಲದಲ್ಲಿ ಕುಸಿಯುವ ಅಂತದಲ್ಲಿದ್ದ ಸೇತುವೆಯ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳಿಗೆ ಹಾಗೂ ಎತ್ತಿನಹೊಳೆ ಯೋಜನೆಯ ಸಂಬಂಧಪಟ್ಟವರಿಗೆ ತಿಳಿಸಿದ್ದರೂ ತಲೆಕೆಡಿಸಿಕೊಳ್ಳದ ಅಧಿಕಾರಿಗಳು ಇದೀಗ ಅಕಾಲಿಕ ಮಳೆಗೆ ಸೇತುವೆಯ ತಳಭಾಗ ಸಂಪೂರ್ಣ ಕುಸಿದು ಹೋಗಿದೆ.
ಎತ್ತಿನಹೊಳೆ ಯೋಜನೆ ಅಧಿಕಾರಿಗಳಿಗೆ ಸೇತುವೆ ಅವ್ಯವಸ್ಥೆ ಕುರಿತು ಸಾಕಷ್ಟು ಬಾರಿ ಮಾಹಿತಿ ನೀಡಿದ್ದರು ಕಾಲ ಹರಣ ಮಾಡುತ್ತಲೇ ದಿನ ಕಳೆದ ಹಿನ್ನೆಲೆ ಕುಸಿತಗೊಂಡಿರುವ ಸೇತುವೆ ಮೇಲೆ ಇಪ್ಪತ್ತಕ್ಕೂ ಹೆಚ್ಚು ಮನೆಗಳಿರುವ ಜನರು ಕೌಕೋಡಿ – ಹೊಸರಳ್ಳಿ ಗ್ರಾಮಸ್ಥರು ಸಂಚರಿಸಬೇಕಾಗಿದೆ.
ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಸೇತುವೆಯನ್ನು ದುರಸ್ತಿಪಡಿಸದಿದ್ದರೆ ಉಗ್ರ ಪ್ರತಿಭಟನೆ ಮಾಡಲಾಗುತ್ತದೆ ಎಂದು ಗ್ರಾಮಸ್ಥ ಕಿರಣ್ ಕೌಕೋಡಿ ಎಚ್ಚರಿಸಿದ್ದಾರೆ