ಜೈ ಭೀಮ್ ಕ್ರಿಕೆಟರ್ಸ್ ಕೆಲಗಳಲೆ ವತಿಯಿಂದ ಕ್ರಿಕೆಟ್ ಪಂದ್ಯಾವಳಿ
ಸಕಲೇಶಪುರ;ತಾಲೂಕಿನ ಕೆಲಗಳಲೆ ಗ್ರಾಮದ ಜೈಭೀಮ್ ಕ್ರಿಕೆಟರ್ಸ್ ವತಿಯಿಂದ ಜೈ ಭೀಮ್ ಕಪ್ ಸೀಸನ್ 2 ಪಂದ್ಯಾವಳಿಯನ್ನು ಎಸ್‌ಬಿಎಂಪಿ ಅಧ್ಯಕ್ಷ ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯುತು. ಧರ್ಮರಾಜ್ ಶೆಟ್ಟಿ, ಬಿರಡಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಾರದಾ, ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ವನಜಾಕ್ಚಿ, ಗ್ರಾಮ್ ಪಂಚಾಯತಿ ಸದಸ್ಯರಾದ H. C. ಶೃತಿ ಸುದೀಶ್ ,ಶಿಕ್ಷಕರಾಧ ಆನಂದ್, ಶ್ವೇತಾ, ನಾಗರಾಜ ಗೌಡ, ಚಂದ್ರಶೇಖರ್, ಅರುಣ್ ಕುಮಾರ್,ಹಾಗೂ ಬೆಳೆಗಾರ ಮುಖಂಡ ಕೆ.ಸುದೀಶ್ ರವರುಗಳು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿದರು. ಕ್ರೀಡಾಕೂಟಕ್ಕೆ ಸುದೀಶ್ ಅವರು ಬ್ಯಾಟಿಂಗ್ ಆಡುವುದರ ಮೂಲಕ ಚಾಲನೆ ನೀಡಿದರು.