ಸಕಲೇಶಪುರ :ಗುಲಗಳಲೆ ಅಂಗನವಾಡಿ ನಿರ್ಮಾಣಕ್ಕೆ ನಿವೇಶನ ಹಸ್ತಾಂತರಿಸಿದ ಕಂದಾಯ ಇಲಾಖೆ.
ಸಕಲೇಶಪುರ : ತಾಲ್ಲೂಕಿನ ಬಾಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಲಗಳಲೆ ಗ್ರಾಮದಲ್ಲಿ ಅಂಗನವಾಡಿ ನಿರ್ಮಾಣಕ್ಕೆ ಕಂದಾಯ ಇಲಾಖೆಯಿಂದ ಬಾಗೆ ಗ್ರಾಮ ಪಂಚಾಯಿತಿಗೆ ನಿವೇಶನವನ್ನು ಬುಧವಾರ ಹಸ್ತಾಂತರಿಸಲಾಯಿತು .
ಸರ್ಕಾರದಿಂದ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಆದೇಶ ಬಂದಿದ್ದರೂ ನಿವೇಶನದ ಕೊರತೆಯಿಂದ ನಿರ್ಮಾಣ ಕಾರ್ಯ ನಡೆದಿರಲಿಲ್ಲ .ಬಾಗೆ ಗ್ರಾಮ ಪಂಚಾಯಿತಿಯ ಮನವಿ ಮೇರೆಗೆ ಕಂದಾಯ ಇಲಾಖೆಯು ಒತ್ತುವರಿಯಾಗಿದ್ದ ಜಾಗವನ್ನು ತೆರವುಗೊಳಿಸಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಜಾಗವನ್ನು ಪಂಚಾಯಿತಿಯ ಪಿಡಿಒ ಅವರಿಗೆ ಹಸ್ತಾಂತರಿಸಿದ್ದಾರೆ .
ಈ ಸಂದರ್ಭದಲ್ಲಿ ಉಪ ತಹಸೀಲ್ದಾರ್ ರೂಪೇಶ್ ,ರಾಜಸ್ವ ನಿರೀಕ್ಷಕರಾದ ಅಭಿಲಾಷ್ ಗ್ರಾಮಲೆಕ್ಕಾಧಿಕಾರಿ ಸುನೀಲ್ ,ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜೈಶಂಕರ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಿನ್ನಸ್ವಾಮಿ ಸೇರಿದಂತೆ ಪಂಚಾಯಿತಿ ಸದಸ್ಯರುಗಳು ಇದ್ದರು