Monday, March 17, 2025
Homeಸುದ್ದಿಗಳುಸಕಲೇಶಪುರಅಧಿಕಾರಿಯೋರ್ವರ ಬೀಳ್ಕೋಡುಗೆ ಸಮಾರಂಭಕ್ಕೆ ವಸೂಲಾತಿಗೆ ಇಳಿದ ತಾಲೂಕಿನ ಕೆಲವು ಅಧಿಕಾರಿ ವಲಯ

ಅಧಿಕಾರಿಯೋರ್ವರ ಬೀಳ್ಕೋಡುಗೆ ಸಮಾರಂಭಕ್ಕೆ ವಸೂಲಾತಿಗೆ ಇಳಿದ ತಾಲೂಕಿನ ಕೆಲವು ಅಧಿಕಾರಿ ವಲಯ

 

ಸಕಲೇಶಪುರ: ಇತ್ತೀಚೆಗಷ್ಟೆ ವರ್ಗಾವಣೆಯಾದ ತಾಲೂಕಿನ ಅಧಿಕಾರಿಯೋರ್ವರಿಗೆ ಅದ್ದೂರಿಯ ಬೀಳ್ಕೋಡುಗೆ ಸಮಾರಂಭ ಏರ್ಪಡಿಸಲು ಕೆಲವು ಅಧಿಕಾರಿಗಳು ವಿವಿಧ ಇಲಾಖೆಗಳಿಂದ ವಸೂಲಾತಿಗೆ ಇಳಿದಿದ್ದಾರೆಂದು ತಿಳಿದು ಬಂದಿದ್ದು ಇದು ಹಲವು ಇಲಾಖೆಗಳ ಸಿಬ್ಬಂದಿಗಳಲ್ಲಿ ಅಸಮಾಧಾನ ಉಂಟಾಗಲು ಕಾರಣವಾಗಿದೆ. ಈಗಾಗಲೇ ತಾಲೂಕಿನ ಕೆಲವು ಇಲಾಖೆಗಳ ಅಧಿಕಾರಿಗಳು ವರ್ಗಾವಣೆಯಾಗಿದ್ದರು ಸಹ ಇಲ್ಲೆ ರೆಸಾರ್ಟ್‌ ಮಾಲಿಕರ ಜೊತೆ ಸುತ್ತಾಡುತ್ತಿರುವುದು ಕಂಡು ಬಂದಿದೆ.  ಅದ್ದೂರಿ ಬೀಳ್ಕೋಡುಗೆಯೊಂದಿಗೆ ಉಡುಗೊರೆ ನೀಡಲು ಕೆಲ ಅಧಿಕಾರಿಗಳಿಗೆ 50 ಸಾವಿರಕ್ಕೂ ಹೆಚ್ಚು ಹಣ ಬೇಡಿಕೆ ಇಡಲಾಗಿದೆ.

ಇನ್ನು ಕೆಲವು ಅಧಿಕಾರಿಗಳು ನ್ಯಾಯಾಲಯದ ಮೊರೆ ಹೋಗಿದ್ದು ಒಟ್ಟಾರೆ ಸಕಲೇಶಪುರ ದಲ್ಲಿ ಅಧಿಕಾರಿ ವರ್ಗದವರದೆ ಆಟವಾಗಿದೆ.ವರ್ಗಾವಣೆ ಎಂಬುದು ಸಾಮಾನ್ಯ ಪ್ರಕ್ರಿಯೆಯಾಗಿದ್ದು ತಾಲೂಕಿನ ಯಾವುದೇ ಜ್ವಲಂತ ಸಮಸ್ಯೆಯನ್ನು ಬಗೆಹರಿಸದ ಒಬ್ಬ ಅಧಿಕಾರಿಗೆ ಇಷ್ಟೆಲ್ಲಾ ಬಿಲ್ಡ್ ಅಪ್ ಬೇಕಾ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ

RELATED ARTICLES
- Advertisment -spot_img

Most Popular