ಸಕಲೇಶಪುರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬೇಟಿ : ಎಸ್. ಪಿ ಹರಿರಾಮ್ ಶಂಕರ್ ರಿಂದ ಸ್ಥಳ ಪರಿಶೀಲನೆ
ಡಿಸೆಂಬರ್ 13 ಮಂಗಳವಾರ ತಾಲೂಕಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಇನ್ನಿತರ ರಾಜ್ಯ ಸರ್ಕಾರ ಸಚಿವರುಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಅಧಿಕಾರಿ ಹರಿರಾಮ್ ಶಂಕರ್ ಸ್ಥಳ ಪರಿಶೀಲನೆ ನಡೆಸಿದರು.
ಶುಕ್ರವಾರ ತಾಲೂಕಿನ ಎಪಿಎಂಸಿ ಆವರಣಕ್ಕೆ ಭೇಟಿ ನೀಡಿದ ಹರಿರಾಮ್ ಶಂಕರ್ ಅವರು ಕಾರ್ಯಕ್ರಮ ಜರುಗುವ ವೇದಿಕೆ, ಮೈದಾನ, ಸಾರ್ವಜನಿಕರ ಊಟದ ವ್ಯವಸ್ಥೆಗೆ, ವಾಹನಗಳ ಪಾರ್ಕಿಂಗ್ ಸ್ಥಳ, ಹಾಗೂ ಮುಖ್ಯಮಂತ್ರಿಗಳು ವೇದಿಕೆಗೆ ಕರೆದಿರುವ ಹಾದಿಯ ಹಾಗೂ ಸುಭಾಷ್ ಮೈದಾನದಲ್ಲಿನ ಹೆಲಿಪ್ಯಾಡ್ ಸ್ಥಳವನ್ನು ಪರಿಶೀಲನೆ ನಡೆಸಿದರು
ಈ ಸಂದರ್ಭದಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕ ಮಿಥುನ್, ವೃತ್ತ ನೀರಿಕ್ಷಕ ಚೈತನ್ಯ, ಗ್ರಾಮಾಂತರ ಪಿಎಸ್ಐ ಬಸವರಾಜ್, ನಗರ ಠಾಣಾ ಪಿಎಸ್ಐ ಶಿವಶಂಕರ್, ತಾಲೂಕು ಮಂಡಳ ಅಧ್ಯಕ್ಷ ಮಂಜುನಾಥ್ ಸಂಘಿ, ಬಿಜೆಪಿ ಮುಖಂಡ ಕ್ಯಾಮನಹಳ್ಳಿ ರಾಜಕುಮಾರ್ ಇದ್ದರು,