Monday, April 21, 2025
Homeಸುದ್ದಿಗಳುಸಕಲೇಶಪುರನಿವೃತ್ತ ಶಿಕ್ಷಕ ಶಿವಪ್ಪ ಮಾಸ್ಟರ್ ನಿಧನ

ನಿವೃತ್ತ ಶಿಕ್ಷಕ ಶಿವಪ್ಪ ಮಾಸ್ಟರ್ ನಿಧನ

ನಿವೃತ್ತ ಶಿಕ್ಷಕ ಶಿವಪ್ಪ ಮಾಸ್ಟರ್ ನಿಧನ

ಸಕಲೇಶಪುರ : ತಾಲೂಕಿನ ಬಾಳ್ಳುಪೇಟೆ ಬಸವೇಶ್ವರ ನಗರದ ಶಿವಪ್ಪ ಗೌಡ (68) ವಯೋ ಸಹಜ ಕಾಯಿಲೆಯಿಂದ  ಭಾನುವಾರ ರಾತ್ರಿ ನಿಧನರಾಗಿದ್ದಾರೆ.

ಬಾಳ್ಳುಪೇಟೆಯ ಶಾಲೆಯಲ್ಲಿ 10 ವರ್ಷ,ಹಸುಗವಳ್ಳಿ 5 ವರ್ಷ ಹಾಗೂ ಕೆಂಚಮ್ಮನ ಹೊಸಕೋಟೆ ಬಳಿಯ ಹರಿಹಳ್ಳಿ ಸರ್ಕಾರಿ ಶಾಲೆಯಲ್ಲಿ ತಮ್ಮ ಸೇವೆ ಸಲ್ಲಿಸಿದ್ದ ಇವರು ಹರಿಹಳ್ಳಿ ಶಾಲೆಯಲ್ಲೇ ನಿವೃತ್ತಿ ಜೀವನದವರೆಗೂ ಕರ್ತವ್ಯ ನಿರ್ವಹಿಸಿದ್ದ ಶಿವಪ್ಪನವರು 8 ವರ್ಷಗಳ ಹಿಂದೆ ನಿವೃತ್ತಿಯಾಗಿದ್ದರು.

ಮೃತರಿಗೆ ಇಬ್ಬರು ಪುತ್ರರು ಹಾಗೂ ಪತ್ನಿಯನ್ನು ಅಗಲಿದ್ದಾರೆ. ಅಪಾರ ಬಂಧು ಬಳಗ ಹೊಂದಿರುವ ಇವರಿಗೆ  ತಾಲೂಕಿನ ಶಿಕ್ಷಕರ ಸಂಘ ತೀವ್ರ ಸಂತಾಪ ಸೂಚಿಸಿದೆ.

ಮೃತರ ಅಂತ್ಯಕ್ರಿಯೆ ತಾಲೂಕಿನ ಗುಲಗಳಲೆ ಸಮೀಪದ ಮಾಸುವಳ್ಳಿಯಲ್ಲಿ ನೆಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

RELATED ARTICLES
- Advertisment -spot_img

Most Popular