Monday, November 25, 2024
Homeಸುದ್ದಿಗಳುಸಕಲೇಶಪುರಸಕಲೇಶಪುರ ; ಬಹು ಜನರಿಗೆ ಸ್ವಾಭಿಮಾನ ಹಾಗೂ ಸ್ಫೂರ್ತಿ ತಂದುಕೊಟ್ಟ ಕೋರೆಗಾಂವ್ ಯುದ್ಧ : ರಾ...

ಸಕಲೇಶಪುರ ; ಬಹು ಜನರಿಗೆ ಸ್ವಾಭಿಮಾನ ಹಾಗೂ ಸ್ಫೂರ್ತಿ ತಂದುಕೊಟ್ಟ ಕೋರೆಗಾಂವ್ ಯುದ್ಧ : ರಾ ಚಿಂತನ್

ಸಕಲೇಶಪುರ : ಸಾವಿರಾರು ವರ್ಷಗಳಿಂದ ಶಿಕ್ಷಣ ಹಾಗೂ ಸಂಪತ್ತಿನಿಂದ ವಂಚಿತರಾಗಿದ್ದ ದಲಿತ, ಹಿಂದುಳಿದ ಸಮುದಾಯಗಳಿಗೆ ಸ್ವಾಭಿಮಾನದ ಕಿಚ್ಚಾಗಿತ್ತು ಭೀಮಾ ಕೊರೆಂಗಾವ್ ವಿಜಯೊತ್ಸವ ಎಂದು ಚಿಂತಕ ರಾ ಚಿಂತನ್ ಹೇಳಿದರು.
ಭೀಮ ಕೋರೆಗಾಂವ್ ವಿಜಯೋತ್ಸವ ಸಮಿತಿ ವತಿಯಿಂದ ಇಂದು ಪಟ್ಟಣದಲ್ಲಿ ಅದ್ದೂರಿಯಾಗಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಮಾತನಾಡಿ, 1818 , ಜನವರಿ ೧ರಂದು ನಡೆದ ಭೀಮಾ ಕೋರೆಗಾಂವ್ ವಿಜಯೋತ್ಸವದ ಮಹತ್ವವನ್ನು ಯುವ ಜನತೆ ಅರಿತುಕೊಂಡಿದ್ದೇ ಆದರೆ, ಮಹಾರ್ ಭೀಮ ಸೈನಿಕರಲ್ಲಿದ್ದ ಸ್ವಾಭಿಮಾನದೆಡೆಗಿನ ತುಡಿತ ಇಂದಿನ ಯುವ ಜನತೆಯ ಮನಸಿನೊಳಗೂ ಮೊಳಕೆಯೊಡೆಯಲು ಸಾಧ್ಯವಾಗ ಬೇಕು. ಸ್ವಾಭಿಮಾನಯೆಂಬ ಕಿಚ್ಚು ಮೊಳಕೆಯನ್ನು ಸಸಿಯಾಗಿಸಿ, ಗಿಡವಾಗಿಸಿ, ಮರವಾಗಿಸುವುದು ಅಷ್ಟು ಸುಲಭವಲ್ಲ. ಸ್ವಾಭಿಮಾನದ ಕಿಚ್ಚನ್ನು ಶ್ರದ್ಧೆಯಿಂದ ಮೈಗೂಡಿಸಿದಾಗ ಮಾತ್ರ ಜೀವನದಲ್ಲಿ ಯಶಸ್ಸು ಕಂಡು ಕೊಳ್ಳಬಹುದು ಎಂದರು. ಪೇಶ್ವೆಗಳ ಮನಸ್ಥಿತಿಯ ಕೆಲವರು ಇನ್ನು ನಮ್ಮ ನಡುವೆ ಉಳಿದಿದ್ದಾರೆ ಅವರ ಬಗ್ಗೆ ಜಾಗೃತರಾಗಬೇಕು ಎಂದು ಕರೆ ನೀಡಿದರು.

ಬುದ್ಧ, ಬಸವ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಸಾಗಿ ಬಂದ ಚಿಂತನಾ ಮಾರ್ಗದಲ್ಲಿ ಸಾಗಬೇಕಾದ ಅನಿವಾರ್ಯತೆ ಇದೆ‌. ಇತ್ತೀಚಿನ ದಿನಗಳಲ್ಲಿ ಬಹುಸಂಖ್ಯಾಂತರನ್ನು ಶಿಕ್ಷಣದಿಂದ ವಂಚಿಸುವ ಕಾರ್ಯ ನಡೆಯುತ್ತಿದೆ, ಯಾವುದೇ ಶಿಕ್ಷಣದಿಂದ ವಂಚಿತರಾಗಬಾರದು ಎಷ್ಟೇ ಕಷ್ಟದಲ್ಲಿದ್ದರು ಶಿಕ್ಷಣವನ್ನು ಪಡೆದೇ ತೀರಬೇಕು ಎಂದು ಹೇಳಿದರು.
ಚಿಂತಕ ದೀಪುಗೌಡ ಮಾತನಾಡಿ, ಭೀಮಾ ಕೋರೆಗಾಂವ್ ಯುದ್ಧದ ವಿಜಯವು ಕರ್ಗತ್ತಲಿನಲ್ಲಿ ಮುಚ್ಚಿಹೊಗಿದ್ದ ಇತಿಹಾಸವನ್ನು ಮುಂದಿನ ತಲೆಮಾರಿಗಳಿಗೆ ಸ್ವಾಭಿಮಾನದ ಪ್ರತೀಕವಾಗಿ ಶಾಶ್ವತವಾಗಿ ಉಳಿಸಿದವರು ಬಾಬಾ ಸಾಹೇಬ್ ಅಂಬೇಡ್ಕರವರು ಎಂದರು. ದೇಶದಲ್ಲಿ ಮುಂದೊಂದು ದಿನ ವಿದ್ಯ ಕ್ಷೇತ್ರವು ಸಂಪೂರ್ಣವಾಗಿ ಖಾಸಗೀಕರಣ ಮಾಡುವ ಮೂಲಕ ಕೆಳವರ್ಗದ ಜನರಿಗೆ ವಿದ್ಯೆಯಿಂದ ವಂಚಿಸುವ ಸಾದ್ಯತೆಗಳಿದ್ದು ಈ ಕಾರಕ್ಕಾದರು ಕೆಳವರ್ಗದವರು ವಿದ್ಯಾಸಂಸ್ಥೆ ಮುನ್ನೆಡಸಬೇಕು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪೂಜ್ಯ ವರಜ್ಯೋತಿ ಭಂತೇಜಿ 1818ರ ಜನವರಿ 1ರಂದು, ಸಾವಿರಾರು ವರ್ಷಗಳಿಂದ ಶೋಷಣೆಗೊಳಪಟ್ಟು ಬದುಕುತ್ತಿದ್ದ ಅಸ್ಪೃಶ್ಯ ಸಮುದಾಯದ ಕೇವಲ 5೦೦ ಜನ ಮಹಾರ್ ಸೈನಿಕರು 28000 ಪೇಳ್ವೆ ಮರಾಠ ಸೈನಿಕರ ವಿರುದ್ಧ ಸ್ವಾಭಿಮಾನ ಹಾಗೂ ಶಿಕ್ಷಣದ ಹಕ್ಕು ಮತ್ತು ಗೌರವಯುತ. ಬದುಕುವ ಹಕ್ಕಿಗಾಗಿ ಷರತ್ತಿನ ಆಧಾರದ ಮೇಲೆ ಬ್ರಿಟೀಷರ ಪರವಾಗಿ ಹೋರಾಡಿ ಜಯಿಸಿ, ಶೌರ್ಯವನ್ನು ಮೆರೆದು ಕೇವಲ ಕೆಲವೇ ಕೆಲವು ಸಮುದಾಯಗಳಿಗೆ ಮೀಸಲಾಗಿದ್ದ ಉದ್ಯೋಗ ಮತ್ತು ಶಿಕ್ಷಣದ ಅವಕಾಶವನ್ನು ಪ್ರತಿಯೊಬ್ಬರಿಗೂ ತಲುಪಿಸುವಂತಹ ಸಾರ್ವತ್ರಿಕ ಶಿಕ್ಷಣ ನೀತಿಯನ್ನು ಜಾರಿಗೆ ತರಲು ನಾಂದಿಯಾಯಿತು ಎಂದರು

ಎಸ್.ಎನ್.ಮಲ್ಲಪ್ಪ, ರಾಮಚಂದ್ರ ರಾವ್, ಯಡೆಹಳ್ಳಿ ಆರ್ ಮಂಜುನಾಥ್, ಸಲೀಂ ಕೊಲ್ಲಹಳ್ಳಿ, ಎಸ್.ಎಸ್.ಅಸ್ಲಂ, ಅಬ್ದುಲ್ ಸಮ್ಮದ್, ಎಂ ಸೋಮಶೇಖರ್, ಕೊಮಾರಯ್ಯ , ರಾಜಶೇಖರ್ ಭೀಮ ಕೋರೆಗಾಂವ್ ವಿಜಯೋತ್ಸವ ಸಮಿತಿ ಆಯೋಜಕರಾದ ಎಂ.ಆರ್.ವೇಣು, ಹೆನ್ನಲಿ ಶಾಂತರಾಜು.ಇತರರು ಇದ್ದರು.

RELATED ARTICLES
- Advertisment -spot_img

Most Popular