Monday, March 24, 2025
Homeಸುದ್ದಿಗಳುಜಿಂಬಾಬ್ವೆ ಎದುರು 1 ರನ್‌ನಿಂದ ಸೋತ ಪಾಕಿಸ್ತಾನ: ಸೆಮಿಫೈನಲ್ ಕಷ್ಟ ಕಷ್ಟ

ಜಿಂಬಾಬ್ವೆ ಎದುರು 1 ರನ್‌ನಿಂದ ಸೋತ ಪಾಕಿಸ್ತಾನ: ಸೆಮಿಫೈನಲ್ ಕಷ್ಟ ಕಷ್ಟ

ಪರ್ತ್ : ಪರ್ತ್ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ ಸೂಪರ್ 12ರ ಪಂದ್ಯದಲ್ಲಿ ಜಿಂಬಾಬ್ವೆ ತಂಡ ಪಾಕಿಸ್ತಾನಕ್ಕೆ ಆಘಾತಕಾರಿ ಸೋಲುಣಿಸಿದೆ. ಸತತ ಎರಡನೇ ಸೋಲು ಕಂಡಿರುವ ಪಾಕಿಸ್ತಾನದ ಸೆಮಿಫೈನಲ್ ಹಾದಿ ಮತ್ತಷ್ಟು ದುರ್ಗಮವಾಗಿದೆ.

ಗೆಲ್ಲಲು 131 ರನ್‌ಗಳ ಸಾಧಾರಣ ಗುರಿ ಪಡೆದ ಪಾಕಿಸ್ತಾನ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 129 ರನ್‌ಗಳನ್ನಷ್ಟೆ ಗಳಿಸಲು ಸಾಧ್ಯವಾಯಿತು. ಆ ಮೂಲಕ 1 ರನ್‌ಗಳ ಸೋಲೊಪ್ಪಿಕೊಂಡಿತು.

ಕೊನೆಯ ಓವರ್‌ನಲ್ಲಿ ಗೆಲ್ಲಲು ಪಾಕಿಸ್ತಾನಕ್ಕೆ 11 ರನ್‌ಗಳ ಅಗತ್ಯವಿತ್ತು. ಬ್ರಾಡ್ ಇವನ್ ಎಸೆದ ಮೊದಲ ಎಸೆತದಲ್ಲಿ ಪಾಕಿಸ್ತಾನದ ಬ್ಯಾಟರ್ ಮೊಹಮ್ಮದ್ ನವಾಜ್ 3 ರನ್ ಗಳಿಸಿದರು. ಎರಡನೇ ಎಸೆತದಲ್ಲಿ ಮೊಹಮ್ಮದ್ ವಾಸಿಂ ಬೌಂಡರಿ ಗಳಿಸಿದರು. ಅಲ್ಲಿಗೆ ನಾಲ್ಕು ಎಸೆತಗಳಲ್ಲಿ 4 ರನ್ ಮಾತ್ರ ಅಗತ್ಯವಿತ್ತು.

RELATED ARTICLES
- Advertisment -spot_img

Most Popular