ಸಕಲೇಶಪುರ: ಮಳಲಿ ಗ್ರಾಮದ ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಸೋಮವಾರದಂದು ದೀಪೋತ್ಸವದ ಪೂಜಾ ಕಾರ್ಯಕಮವನ್ನು ನೆರವೇರಿಸಲಾಯಿತು.
ಮುಂಜಾನೆ 7:00 ಗಂಟೆಗೆ ಶ್ರೀಸ್ವಾಮಿಗೆ “`*ಶ್ರೀಮಹಾರುದ್ರಾಭಿಷೇಕ*. 10:00 ಗಂಟೆಗೆ *ಏಕದಶ ರುದ್ರ ಮಹಾಹೋಮ * 12:30ಕ್ಕೆ ಪೂರ್ಣಹುತಿ ನಂತರ ಮಹಾಮಂಗಳಾರತಿ-ತೀರ್ಥ ಪ್ರಸಾದ ವಿನಿಯೋಗದೊಂದಿಗೆ
ಬಂದಂತಹಎಲ್ಲಾ ಭಕ್ತಾದಿಗಳಿಗೆ ಏಕದಶ ರುದ್ರ ಮಹಾಹೋಮದ ಪ್ರಸಾದವಾಗಿ ರುದ್ರಾಕ್ಷಿಯನ್ನು ನೀಡಲಾಯಿತು..ಸಂಜೆ ಮಲೆನಾಡು ಸುಗ್ಗಿ ವಾದ್ಯದೊಂದಿಗೆ ದೀಪಗಳನ್ನು ಬೆಳಗಿಸಿ ದೀಪೋತ್ಸವನ್ನು ಆಚರಿಸಲಾಯಿತು..