ಹಾಸನ: ಮದುವೆ ರದ್ದಾಗಿದ್ದಕ್ಕೆ ಮನನೊಂದು ಮಹಿಳೆ ಜೊತೆ ಯೋಧ ಆತ್ಮಹತ್ಯೆ
ಎರಡನೆ ಮದುವೆಗೆ ತಯಾರಿ ನಡೆಸಿದ್ದ ಯೋಧ ಕಿರಣ್ ಕುಮಾರ್ ಮದುವೆ ರದ್ದಾಗಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಾಸನ: ವಿಧವೆಯ ಜೊತೆ ಮಧುವೆಯಾಗಿರೊ ವಿಚಾರ ಮುಚ್ಚಿಟ್ಟು ಎರಡನೆ ಮದುವೆ ತಯಾರಿ ನಡೆಸಿದ್ದ ಯೋಧ ಕಿರಣ್ ಕುಮಾರ್ ಮದುವೆ ರಾದ್ಧಾಂತವಾಗಿ ನಿಂತುಹೋಗಿತ್ತು. ಇದರಿಂದ ಮನನೊಂದ ಯೋಧ ಕಿರಣ್ ಕುಮಾರ್ ಮಹಿಳೆ ಜೊತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕಿರಣ್ ಹಾಗು ಆಶಾ ಮೃತದುರ್ದೈವಿಗಳು. ಯೋಧ ಕಿರಣ್ ಕುಮಾರ್ ಇಂದು (ನ. 11) ಹಾಸನ ತಾಲ್ಲೂಕಿನ ಹೊಂಗೆರೆ ಗ್ರಾಮದ ಬಳಿ ಒಂದೇ ಹಗ್ಗದಲ್ಲಿ ಒಂದೇ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.