Monday, March 24, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ ಪಟ್ಟಣದ ಅರೇಹಳ್ಳಿ ರಸ್ತೆಯಲ್ಲಿ ದ್ವಿಚಕ್ರವಾಹನಕ್ಕೆ ಬಸ್ ಡಿಕ್ಕಿ: ಅದೃಷ್ಟವಷಾತ್ ಪಾರಾದ ದ್ವಿಚಕ್ರ ವಾಹನ ಸವಾರ:...

ಸಕಲೇಶಪುರ ಪಟ್ಟಣದ ಅರೇಹಳ್ಳಿ ರಸ್ತೆಯಲ್ಲಿ ದ್ವಿಚಕ್ರವಾಹನಕ್ಕೆ ಬಸ್ ಡಿಕ್ಕಿ: ಅದೃಷ್ಟವಷಾತ್ ಪಾರಾದ ದ್ವಿಚಕ್ರ ವಾಹನ ಸವಾರ: ವಾಹನಕ್ಕೆ ತುಸು ಹಾನಿ

 

ಸಕಲೇಶಪುರ: ಪಟ್ಟಣದ ತೇಜಸ್ವಿ ಚಿತ್ರಮಂದಿರದ ಸಮೀಪ ಅರೇಹಳ್ಳಿ ಕಡೆಗೆ ಹೋಗುತ್ತಿದ್ದ ಸಕಲೇಶಪುರ ಡಿಪೋಗೆ ಸೇರಿರುವ ಡಕೋಟ ಬಸ್ಸೊಂದರ ಚಾಲಕ ಗೇರು ಬದಲಾಯಿಸಲು ಯತ್ನಿಸಿದಾಗ ಗೇರಿಗೆ ಬೀಳದೆ ನ್ಯೂಟ್ರಲ್ ಗೆ ಬಿದ್ದ ಪರಿಣಾಮ ಬಸ್ ಹಿಂಭಾಗ ಸುಮಾರು 3 ಅಡಿ ಹಿಂದೆ ಇದ್ದ ದ್ವಿಚಕ್ರ ವಾಹನಕ್ಕೆ ಹಾಗೂ ಮತ್ತೊಂದು ಹೊಸ ನಾಲ್ಕು ಚಕ್ರದ ವಾಹನಕ್ಕೆ ಡಿಕ್ಕಿಯಾಗಿದೆ. ಹೊಸ ನಾಲ್ಕು ಚಕ್ರದ ವಾಹನದ ಬಂಪರ್ ಜಖಂಗೊಂಡರೆ ದ್ವಿಚಕ್ರವಾಹನ ಮುಂಭಾಗ ಜಖಂಗೊಂಡಿರುತ್ತದೆ.  ವಾಹನ ಚಾಲಕ ಎಂ.ಆರ್.ಎಫ್ ಟೈರ್ ಷೋರೂಮ್ ಮಾಲಿಕ ಲೋಹಿತ್ ಗೌಡ ತೇಜಸ್ವಿ ಚಿತ್ರ ಮಂದಿರದ ಸಮೀಪ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿರುವುದಲ್ಲದೆ ರಸ್ತೆ ಕಿರಿದಾಗಿರುವುದಲ್ಲದೆ,ಸಕಲೇಶಪುರ ಡಿಪೋದ ಬಹುತೇಕ ಬಸ್ ಗಳು ಡಕೋಟ ಸ್ಥಿತಿಯಲ್ಲಿರುವುದರಿಂದ ಈ ರೀತಿಯ ಘಟನೆ ನಡೆಯುತ್ತಿರುತ್ತದೆ. ಈ ನಿಟ್ಟಿನಲ್ಲಿ ಕೂಡಲೆ ತೇಜಸ್ವಿ ವೃತ್ತವನ್ನು ಅಗಲಿಕರಿಸಬೇಕು ಮತ್ತು ವೃತ್ತದಲ್ಲಿ ಗುಂಡಿ ಬಿದ್ದಿರುವ ರಸ್ತೆಯನ್ನು ಮರುಡಾಂಬರಿಕರಣ ಮಾಡಬೇಕು ಹಾಗೂ ಸಕಲೇಶಪುರ ಬಸ್ ಡಿಪೋವನ್ನು ಕೂಡಲೆ ಹಾಸನ ವಿಭಾಗಕ್ಕೆ ಸೇರಿಸಬೇಕೆಂದು ಹೇಳಿದ್ದಾರೆ.

 

RELATED ARTICLES
- Advertisment -spot_img

Most Popular