ಸಕಲೇಶಪುರ: ತಾಲೂಕಿನ, ಯಸಳೂರು ಹೋಬಳಿ, ಕೆರೋಡಿ, ಹಾಗೂ ತಾರೀಬೈಲು ಗ್ರಾಮದಲ್ಲಿ ಗುರುವಾರ ರಾತ್ರಿ ಸುಮಾರು ಐದು ಕಾಡಾನೆಗಳ ಹಿಂಡು ತಾರೀಬೈಲು ಗ್ರಾಮದ ನಿವಾಸಿ ಗಿರೀಶ್ ಎಂಬುವವರ ಗದ್ದೆಯಲ್ಲಿ ದಾಂದಲೆ ನಡೆಸಿ ವ್ಯಾಪಕ ನಷ್ಟ ಉಂಟು ಮಾಡಿದೆ.ಜೊತೆಗೆ ಶಿವನಹಳ್ಳಿ ಗ್ರಾಮದ ರೇಣುಕಾ ಎಂಬುವರ ಕಾಫಿ ತೋಟದೊಳಗೆ ನುಗ್ಗಿ ಗಿಡಗಳನ್ನು ಮುರಿದಿದ್ದು ಅಲ್ಲಿಂದ ಮುಂದೆ ಹೋಗಿ ಕೆಂಚಪ್ಪ ಎಂಬುವವರ ಪಾಳು ತೋಟದಲ್ಲಿ ಬೀಡು ಬಿಟ್ಟಿರುತ್ತವೆ.
ಈ ವಿಷಯವನ್ನು ಯಸಳೂರು ವಲಯ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದು ಅರಣ್ಯ ಸಿಬ್ಬಂದಿಯವರು ಬಂದು ಆನೆ ಇರುವ ಸ್ಥಳವನ್ನು ಪರಿಶೀಲನೆ ಮಾಡಿ ಸ್ಥಳದಿಂದ ಓಡಿಸಿರುತ್ತಾರೆ. ಕಾಡಾನೆಗಳ ಭಯದಿಂದ ಇಲ್ಲಿನ ಸುತ್ತಮುತ್ತಲಿನ ಜನರು ತಮ್ಮ ಗದ್ದೆಗಳಿಗೆ ಹಾಗೂ ತೋಟಗಳಿಗೆ ಹೋಗಲು ಭಯಬೀತರಾಗಿರುತ್ತಾರೆ. ದಯವಿಟ್ಟು ತಾರಿಬೈಲು ಗ್ರಾಮದಲ್ಲಿ ಬೀಡು ಬಿಟ್ಟಿರುವ ಆನೆಗಳನ್ನು ಸಂಪೂರ್ಣವಾಗಿ ಸ್ಥಳಾಂತರಿಸಬೇಕೆಂದು ಅರಣ್ಯ ಇಲಾಖೆಗೆ ಕೆರೋಡಿ ಹಾಗೂ ತಾರಿಬೈಲು ಗ್ರಾಮಸ್ಥರ ಪರವಾಗಿ ಸರ್ಕಾರಕ್ಕೆ ಜೆಡಿಎಸ್ ಮುಖಂಡ ಕೆರೋಡಿ ಗ್ರಾಮದ ಕೆ.ಕೆ.ಮಹೇಶ್ ಮನವಿ ಮಾಡಿದ್ದಾರೆ.