Monday, March 24, 2025
Homeಸುದ್ದಿಗಳುಜನಾಕ್ರೋಶ ಭುಗಿಲೇಳುವ ಮೊದಲು ಕಾಡಾನೆ ಸಮಸ್ಯೆ ಬಗೆಹರಿಸಬೇಕು: ಕಾಂಗ್ರೆಸ್ ಮುಖಂಡ ಮುರಳಿ ಮೋಹನ್

ಜನಾಕ್ರೋಶ ಭುಗಿಲೇಳುವ ಮೊದಲು ಕಾಡಾನೆ ಸಮಸ್ಯೆ ಬಗೆಹರಿಸಬೇಕು: ಕಾಂಗ್ರೆಸ್ ಮುಖಂಡ ಮುರಳಿ ಮೋಹನ್

 

ಸಕಲೇಶಪುರ : ಜನಾಕ್ರೋಶ ಭುಗಿಲೇಳುವ ಮೊದಲೇ ಸರಕಾರ ಕಾಡಾನೆ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಕಾಂಗ್ರೆಸ್ ಮುಖಂಡ ಮುರಳಿ ಮೋಹನ್ ಒತ್ತಾಯಿಸಿದರು.


ತಾಲೂಕಿನ ಬೆಳಗೋಡು ಹೋಬಳಿ ಹೊಸ ಕೊಪ್ಪಲಿನಲ್ಲಿ ಗ್ರಾಮಸ್ಥರು ತೋಡಿರುವ ಖೆಡ್ಡಕ್ಕೆ ಕಾಡಾನೆ ಬಿದ್ದಿರುವ
ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ, ಕ್ಷೇತ್ರದಲ್ಲಿ ಕಾಡಾನೆ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಬೆಳೆಗಾರ ಹೈರಾಣಾಗಿದ್ದಾನೆ. ಬೆಳೆಗಾರ ಬೆಳೆದಿರುವ ಬೆಳೆಗಳು ಕಾಡಾನೆ ಉಪಟಳಕ್ಕೆ ನಾಶವಾಗಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಆನೆಗಳ ಉಪಟಳ ತಾಳಲಾರದೆ ಗ್ರಾಮಸ್ಥರು ರೋಸಿಹೋಗಿ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ಖೆಡ್ಡ ತೋಡುವ ಮೂಲಕ ಪ್ರಯತ್ನ ಪಡುತ್ತಿದ್ದಾರೆ. ಈ ಕಾರ್ಯ ಇನ್ನು ಹಲವು ಕಡೆ ಮುಂದುವರೆಯುವ ಮೊದಲು ಸರಕಾರ ಕಾಡಾನೆ ಸಮಸ್ಯೆಯನ್ನು ಬಗ್ಗೆ ಹರಿಸಬೇಕೆಂದು ಒತ್ತಾಯಿಸಿದರು.

RELATED ARTICLES
- Advertisment -spot_img

Most Popular