ಸಕಲೇಶಪುರ /ಬಾಳ್ಳುಪೇಟೆ: ಮನೆ ಬೀಗ ಮುರಿದ ಕಳ್ಳರು ನಗದು ಹಾಗೂ ಚಿನ್ನ, ಬೆಳ್ಳಿ ವಸ್ತುಗಳನ್ನು ದೋಚಿ ಪರಾರಿಯಾಗಿರುವ ಘಟನೆ ಸಕಲೇಶಪುರ ತಾಲೂಕಿನ ಬೆಳಗೋಡು ಹೋಬಳಿ ಜಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ವಾಸಿ ಲವ ಎಂಬುವರಿಗೆ ಸೇರಿದ ಮನೆಯಾಗಿದ್ದು, ಇವರು ಆಸ್ಪತ್ರೆಗೆ ಹೋದ ವೇಳೆ ಈ ಕೃತ್ಯವೆಸಗಿದ್ದಾರೆ. ಮನೆಯಲ್ಲಿದ್ದ ಬೀರು ಮುರಿದು ಸುಮಾರು 25 ಸಾವಿರ ನಗದು, 18ಗ್ರಾಂ ಚಿನ್ನ 150 ಗ್ರಾಂ ಬೆಳ್ಳಿ ವಸ್ತಗಳು ದೋಚಿ ಪರಾರಿಯಾಗಿದ್ದಾರೆ.
ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಇವರು ಕೂಡಿಟ್ಟಿದ್ದ 25000 ಹಣವನ್ನು ಕಳೆದು ಕೊಂಡಿರುತ್ತಾರೆ. ಚಿನ್ನ, ಬೆಳ್ಳಿಯ ಜೊತೆಗೆ ಯೂನಿಯನ್ ಬ್ಯಾಂಕ್‌ನ ಪಾಸ್‌ಬುಕ್, ಪೋಸ್ಟ್ ಆಫೀಸಿನ ಪಾಸ್ ಬುಕ್, ಇನ್ನಿತರ ದಾಖಲಾತಿಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸಕಲೇಶಪುರ ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.