Sunday, March 16, 2025
Homeಸುದ್ದಿಗಳುರಾಜ್ಯದಲ್ಲಿ ಬೆರಕೆ ಸರ್ಕಾರ ಬರೋದು ಗ್ಯಾರಂಟಿ.. ದೇಶಕ್ಕೆ ಕೇಡು ಖಚಿತ... ಹಾಸನಾಂಬೆ ಸನ್ನಿಧಿಯಲ್ಲಿ ಬ್ರಹ್ಮಾಂಡ ಗುರೂಜಿ...

ರಾಜ್ಯದಲ್ಲಿ ಬೆರಕೆ ಸರ್ಕಾರ ಬರೋದು ಗ್ಯಾರಂಟಿ.. ದೇಶಕ್ಕೆ ಕೇಡು ಖಚಿತ… ಹಾಸನಾಂಬೆ ಸನ್ನಿಧಿಯಲ್ಲಿ ಬ್ರಹ್ಮಾಂಡ ಗುರೂಜಿ ಭವಿಷ್ಯ

 

ಹಾಸನ: ನಗರದ ಅಧಿದೇವತೆ ಹಾಸನಾಂಬೆ ದೇವಿಯ ದರ್ಶನ ಪಡೆಯಲು ಶುಕ್ರವಾರ ಆಗಮಿಸಿದ್ದ ಬ್ರಹಾಂಡ ಗುರೂಜಿ ನರೇಂದ್ರಬಾಬು ಶರ್ಮ, ರಾಜ್ಯ ರಾಜಕಾರಣ, ಸಂಸತ್​ ಭವನ ಕುರಿತು ಭವಿಷ್ಯ ನುಡಿದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಬ್ರಹ್ಮಾಂಡ ಗುರೂಜಿ, ರಾಜ್ಯದಲ್ಲಿ ಮುಂದೆ ವಿವಿಧ ಪಕ್ಷಗಳ ಕೂಡಿಕೆ ಸರ್ಕಾರ ಬರುವುದು ಖಚಿತ. ಕಾರಣಿಕರ ಭವಿಷ್ಯದಂತೆ ಯುವಕನೇ ಮುಖ್ಯಮಂತ್ರಿ ಆಗಬೇಕಿಂದಿಲ್ಲ, ಅನುಭವ ಇಲ್ಲದ ವ್ಯಕ್ತಿ ಮುಖ್ಯಮಂತ್ರಿ ಆಗುತ್ತಾನೆ ಎಂಬುದಾಗಿಯೂ ಅರ್ಥೈಸಿಕೊಳ್ಳಬಹುದು ಎಂದರು. ರಾಜ್ಯದಲ್ಲಿ ಮುಂದೆ ಬೆರಕೆ ಸಂಸಾರ ಗ್ಯಾರಂಟಿ, ಮುಂದಿನ ಮೂವತ್ತೊಂದು ವರ್ಷಗಳಲ್ಲಿ ಕರ್ನಾಟಕ ಮೂರು ಭಾಗಗಳಾಗುವುದು ಮತ್ತು ಭಾರತ ಇಬ್ಭಾಗವಾಗುವುದು ಖಚಿತ, ಸಂಸತ್​ ಭವನವನ್ನು ತ್ರಿಕೋನಾಕಾರದಲ್ಲಿ ನಿರ್ಮಿಸಿರುವುದರಿಂದ ಭಾರತಕ್ಕೆ ಕೇಡು ಉಂಟಾಗಲಿದೆ ಎಂದರು  ಸಂಸತ್​ ಭವನ ವೃತ್ತಾಕಾರವಾಗಿರಬೇಕು, ಇಲ್ಲವೇ ಚೌಕಾಕಾರವಾಗಿರಬೇಕು. ಆದರೆ, ನವದೆಹಲಿಯಲ್ಲಿ ನಿರ್ಮಿಸಿರುವ ನೂತನ ಸಂಸತ್​ ಭವನವು ತ್ರಿಕೋನಾಕಾರ ಆಗಿರುವುದರಿಂದ ಅದರ ಪರಿಣಾಮ ಭಾರತಕ್ಕೆ ಘೋರವಾಗಲಿದೆ. ಇದನ್ನು ವೀರಬ್ರಹ್ಮ ಚರಿತ್ರೆಯಲ್ಲಿ ಬರೆಯಲಾಗಿದೆ. ಜನರ ಮೇಲೆ ಒತ್ತಡ, ದಬ್ಬಾಳಿಕೆ ಹೆಚ್ಚಲಿದೆ. ಭ್ರಷ್ಟಾಚಾರ ಮಿತಿ ಮೀರಲಿದೆ. ಆ ಕಾಲಕ್ಕೆ ದಂಡಂ ದಶಗುಣಂ ಅಂತ ಭಗವಂತ ಬಂದೇ ಬರುತ್ತಾನೆ ಎಂದರು.ಹಾಸನಾಂಬೆ ಸನ್ನಿಧಿಯಲ್ಲಿ ಇದನ್ನು ಹೇಳುತ್ತಿದ್ದೇನೆ. ರಾಜ್ಯದಲ್ಲಿ ಜನ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ಬೆಂಕಿ ಅನಾಹುತ, ಘರ್ಷಣೆ, ನೀರಿನ ಅಭಾವ ಮತ್ತಿತರ ಸಮಸ್ಯೆಗಳು ತಲೆದೋರಲಿವೆ. ಭಿಕ್ಷೆ ಬೇಡಿ ಸರ್ಕಾರ ನಡೆಸಬೇಕಾದ ಸ್ಥಿತಿ ಬರಲಿದೆ ಎಂದರು

RELATED ARTICLES
- Advertisment -spot_img

Most Popular