Friday, April 18, 2025
Homeಸುದ್ದಿಗಳುಸಕಲೇಶಪುರಮಾನವೀಯತೆ ಮೆರೆದ ಶಾಸಕ ಸಿಮೆಂಟ್ ಮಂಜು

ಮಾನವೀಯತೆ ಮೆರೆದ ಶಾಸಕ ಸಿಮೆಂಟ್ ಮಂಜು

ಮಾನವೀಯತೆ ಮೆರೆದ ಶಾಸಕ ಸಿಮೆಂಟ್ ಮಂಜು

ಸಕಲೇಶಪುರ:ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಅಪಘಾತಕ್ಕೀಡಾಗಿ ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತದ ಮಡಿಲಿನಲ್ಲಿ ಬಿದ್ದಿದ್ದ ಯುವಕನಿಗೆ ಸ್ಥಳದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಆ್ಯಂಬುಲೆನ್‌ಸ್ ಕರೆಸಿ ಹೆಚ್ಚಿನ ಚಿಕಿತ್ಸೆಗೆ ಯುವಕನನ್ನು ಹಾಸನದ ಜಿಲ್ಲಾಸ್ಪತ್ರೆಗೆ ಕಳುಹಿಸುವ ಮೂಲಕ ಶಾಸಕ ಸಿಮೆಂಟ್ ಮಂಜು ಮಾನವೀಯತೆ ಮೆರೆದಿದ್ದಾರೆ.

       ರಾಷ್ಟ್ರೀಯ ಹೆದ್ದಾರಿ 75 ಆಲೂರು ತಾಲೂಕು ವ್ಯಾಪ್ತಿಯ ಮಣಿಪುರ ಸಮೀಪ ಸಕಲೇಶಪುರ ತಾಲೂಕಿನ ದೇವಾಲದಕೆರೆ ಗ್ರಾ.ಪಂ ವ್ಯಾಪ್ತಿಯ ಹೊಡಚಹಳ್ಳಿ ಗ್ರಾಮದ ಆಕಾಶ್ ಎಂಬ ಯುವಕ ಬೈಕ್‌ನಲ್ಲಿ ತಮ್ಮ ಸ್ನೇಹಿತನ ಜೊತೆ ಹೋಗುವಾಗ ಅಪಘಾತಕ್ಕೀಡಾಗಿ ತಲೆಗೆ ತೀವ್ರ ಪೆಟ್ಟು ಬಿದ್ದು ರಸ್ತೆಯಲ್ಲೆ ರಕ್ತದ ಮಡುವಿನಲ್ಲಿಬಿದ್ದಿದ್ದು ಈ ಸಂಧರ್ಭದಲ್ಲಿ ಆಲೂರು ಕಡೆಯಿಂದ ಸಕಲೇಶಪುರಕ್ಕೆ ಹೋಗುತ್ತಿದ್ದ ಶಾಸಕ ಸಿಮೆಂಟ್ ಮಂಜು ತಕ್ಷಣ ಇಳಿದು ಯುವಕನ ನೆರವಿಗೆ ಮುಂದಾಗಿದ್ದಾರೆ. ತಕ್ಷಣ ಆಲೂರಿನಿಂದ ಆ್ಯಂಬುಲೆನ್‌ಸ್ ಕರೆಸಿ ಪ್ರಾಥಮಿಕ ಚಿಕಿತ್ಸೆ ನೀಡಿಸಿ ಹಾಸನದ ಜಿಲ್ಲಾಸ್ಪತ್ರೆಗೆ ಕಳುಹಿಸುವ ಮೂಲಕ ಯುವಕನ ಪ್ರಾಣ ರಕ್ಷಣೆಗೆ ಮುಂದಾಗಿರುವುದು ಸಾರ್ವಜನಿಕರ ಶ್ಲಾಘನೆಗೆ ಕಾರಣವಾಗಿದೆ. ಯುವಕನ ಪರಿಸ್ಥಿತಿ ಗಂಭೀರವಾಗಿದ್ದು ಜಿಲ್ಲಾಸ್ಪತ್ರೆಯಲ್ಲಿ ಯುವಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ.

RELATED ARTICLES
- Advertisment -spot_img

Most Popular