Monday, March 17, 2025
Homeಸುದ್ದಿಗಳುಜ.02 ರಂದು ಹೆತ್ತೂರಿನಲ್ಲಿ ಹೋಬಳಿ ಬೆಳೆಗಾರರ ವಾರ್ಷಿಕ ಮಹಾಸಭೆ ಹಾಗೂ ಬೆಳೆಗಾರರ ಸಮಾವೇಶ ಆಯೋಜನೆ.

ಜ.02 ರಂದು ಹೆತ್ತೂರಿನಲ್ಲಿ ಹೋಬಳಿ ಬೆಳೆಗಾರರ ವಾರ್ಷಿಕ ಮಹಾಸಭೆ ಹಾಗೂ ಬೆಳೆಗಾರರ ಸಮಾವೇಶ ಆಯೋಜನೆ.

 

ಹೆತ್ತೂರು ಹೋಬಳಿ ಬೆಳೆಗಾರರ ಸಂಘದಿಂದ ಮಾಧ್ಯಮಗೋಷ್ಠಿ.

ಸಕಲೇಶಪುರ : ತಾಲೂಕಿನ ಹೆತ್ತೂರು ಹೋಬಳಿಯ ಬೆಳೆಗಾರರ ಸಂಘದಿಂದ ಜನವರಿ 02 ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಬೆಳಿಗ್ಗೆ 10 ಗಂಟೆಗೆ ಬೆಳೆಗಾರರ ಸಮಾವೇಶ ಮತ್ತು ಬಾಚಿಹಳ್ಳಿ ಪ್ರತಾಪ್ ಗೌಡ ನಿರ್ಮಿಸಿಕೊಟ್ಟಿರುವ ನೂತನ ಮೇಲಂತಸ್ತಿನ ಕಟ್ಟಡ ಉದ್ಘಾಟನೆ ಹಾಗೂ ವಾರ್ಷಿಕ ಮಹಾಸಭೆಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಎಂ. ಜೆ ಸಚಿನ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪ್ರಸ್ತುತ ಬೆಳೆಗಾರರು ಸಾಕಷ್ಟು ಅನಾನುಕೂಲವನ್ನು ಎದುರಿಸುತ್ತಿದ್ದು ಅಕಾಲಿಕ ಮಳೆ, ಕಾಡು ಪ್ರಾಣಿಗಳಿಂದ ಬೆಳೆಯನ್ನು ರಕ್ಷಿಸಿಕೊಳ್ಳುವುದು ಅಸಾಧ್ಯವಾಗಿದೆ ಆದ್ದರಿಂದ ಸರ್ಕಾರ ಕೂಡಲೇ ಬೆಳೆಗಾರರ ನೆರವಿಗೆ ಧಾವಿಸಬೇಕು ಎಂದು ಅಗ್ರಹಿಸಿದರು.

ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಶ್ರೀಗಳು ದಿವ್ಯ ಸಾನಿಧ್ಯ ವಹಿಸಲಿದ್ದು ಹಾಸನ ಶಾಖ ಮಠದ ಶಂಭುನಾಥ ಸ್ವಾಮಿಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಎಚ್‌.ಪಿ ಸಂದೇಶ್ ಪಾಲ್ಗೊಳ್ಳಲಿದ್ದಾರೆ . ಕಾರ್ಯಕ್ರಮಕ್ಕೆ ಜನಪ್ರತಿನಿಧಿಗಳು, ಬಳೆಗಾರ ಸಂಘದ ಪದಾಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಕಾರ್ಯಕ್ರಮಕ್ಕೆ ಬೆಳೆಗಾರರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಈ ಸಮಯದಲ್ಲಿ ಮನವಿ ಮಾಡಿದರು.

RELATED ARTICLES
- Advertisment -spot_img

Most Popular