Saturday, April 19, 2025
Homeಸುದ್ದಿಗಳುಸಕಲೇಶಪುರವಲಯ ಅರಣ್ಯಾಧಿಕಾರಿ ಜಗದೀಶ್ ಅಮಾನತ್ತು ಆದೇಶ ಎತ್ತಿ ಹಿಡಿದ ಹೈಕೋರ್ಟ್

ವಲಯ ಅರಣ್ಯಾಧಿಕಾರಿ ಜಗದೀಶ್ ಅಮಾನತ್ತು ಆದೇಶ ಎತ್ತಿ ಹಿಡಿದ ಹೈಕೋರ್ಟ್

ವಲಯ ಅರಣ್ಯಾಧಿಕಾರಿ ಜಗದೀಶ್ ಅಮಾನತ್ತು ಆದೇಶ ಎತ್ತಿ ಹಿಡಿದ ಹೈಕೋರ್ಟ್

ಸಕಲೇಶಪುರ: ಯಸಳೂರು ಪ್ರಾದೇಶಿಕ ವಲಯದಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ವಲಯ ಅರಣ್ಯಾಧಿಕಾರಿ ಜಗದೀಶ್ ಜೆ.ಆರ್‌ರವರನ್ನು ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಿದ್ದ ಸರ್ಕಾರಿ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯಲ್ಲಿ ಜಗದೀಶ್‌ರವರು ತಡೆಕೋರಿ ಸಲ್ಲಿಸಿದ್ದ ಅರ್ಜಿಗೆ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯು ತಡೆ ನೀಡಲು ನಿರಾಕರಿಸಿತ್ತು. ಸದರಿ ಆದೇಶದ ವಿರುದ್ಧ ತಡೆಕೋರಿ ಜಗದೀಶ್ ರವರು ಕರ್ನಾಟಕ ಹೈಕೋರ್ಟ್ ನಲ್ಲಿ ರಿಟಿ ಪಿಟಿಷನ್ ದಾಖಲಿಸಿದ್ದರು. ಕರ್ನಾಟಕ ಹೈಕೋರ್ಟ್ ಸದರಿ ರಿಟ್ ಪಿಟಿಷನ್ ಅನ್ನು ವಜಾಗೊಳಿಸಿ ಆದೇಶಿಸಿದೆ. ಈ ಕುರಿತು ವಕೀಲ ಸುಧೀಶ್ ಮಾತನಾಡಿ ಇದು ಅರಣ್ಯ ಇಲಾಖೆಯ ಸಿಬ್ಬಂದಿ ಕಿರಣ್ ಸಕಾಲದಲ್ಲಿ ಇಲಾಖೆ ಪರವಾಗಿ ಕಾರ್ಯದಕ್ಷತೆ ತೋರಿಸಿದ್ದರ ಲಶ್ರುತಿಯಾಗಿದೆ. ಭ್ರಷ್ಟ ಅಧಿಕಾರಿ ವಿರುದ್ದ ಹೈಕೋಟ್ ಉತ್ತಮ ತೀರ್ಮಾನ ಕೈಗೊಂಡಿದೆ. ತಾಲೂಕಿನಲ್ಲಿ ಇನ್ನು ಹಲವು ಭ್ರಷ್ಟ ಅಧಿಕಾರಿಗಳು ಬೇರೂರಿದ್ದು ಇವರ ವಿರುದ್ದ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು. 

RELATED ARTICLES
- Advertisment -spot_img

Most Popular