ರಾಜ್ಯ ಮಟ್ಟದ ಮಕ್ಕಳ ಹಕ್ಕುಗಳ ಸಮಾವೇಶಕ್ಕೆ ಹೆತ್ತೂರಿನ ಎಚ್.ಎಚ್ ವಿಜಯ್ ಆಯ್ಕೆ.
ಸಕಲೇಶಪುರ – ಜಿಲ್ಲಾ ಮಟ್ಟದ ಮಕ್ಕಳ ಹಕ್ಕುಗಳ ಸಮಾವೇಶದಿಂದ ರಾಜ್ಯ ಮಟ್ಟದ ಸಮಾವೇಶಕ್ಕೆ ಹೆತ್ತೂರಿನ ಮಿಲ್ ಸಿದ್ದೇಗೌಡ ಮನೆ ಹರೀಶ್ ಭಾರತಿಯವರ ಮಗನಾದ ಎಚ್. ಎಚ್ ವಿಜಯ್ ಆಯ್ಕೆಯಾಗಿದ್ದಾರೆ.
ವಿಜಯ್ ರೋಟರಿ ಶಾಲೆಯ 9 ನೇ ತರಗತಿ ವಿದ್ಯಾರ್ಥಿಯಾಗಿದ್ದಾರೆ.
ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಚುನಾಯಿತ ಪ್ರತಿನಿಧಿಗಳ ಸಮಾವೇಶಕ್ಕೆ ಹಾಸನ ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ. ವಿಜಯ್ ಅವರ ಈ ಸಾಧನೆಗೆ ರೋಟರಿ ಶಾಲೆಯ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ಅಭಿನಂದಿಸಿದ್ದಾರೆ.