Monday, March 24, 2025
Homeಸುದ್ದಿಗಳುಸಕಲೇಶಪುರಬೆಳಗಾವಿಯಲ್ಲಿ ಹಾಸನದ ಕರವೇ ಸೈನಿಕರ ಹವಾ

ಬೆಳಗಾವಿಯಲ್ಲಿ ಹಾಸನದ ಕರವೇ ಸೈನಿಕರ ಹವಾ

ಬೆಳಗಾವಿಯಲ್ಲಿ ಹಾಸನದ ಕರವೇ ಸೈನಿಕರ ಹವಾ

 ಜಿಲ್ಲಾಧ್ಯಕ್ಷ ಸಿ.ಡಿ ಮನು ಕುಮಾರ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಬೆಳಗಾವಿಗೆ ತೆರಳಿದ್ದಾರೆ.

 ಮಹಾರಾಷ್ಟ್ರದ ಸಚಿವರು ಕರ್ನಾಟಕಕ್ಕೆ ಕಾಲಿಡುವ ಹುಚ್ಚು ಧೈರ್ಯ ತೋರಿದ್ದಾರೆ ಮಹಾರಾಷ್ಟ್ರ ಸಚಿವರು ಕರ್ನಾಟಕಕ್ಕೆ ಕಾಲಿಡದಂತೆ ತಡೆಯಲು ಕರ್ನಾಟಕ ರಕ್ಷಣಾ ವೇದಿಕೆಯ ಸಾವಿರಾರು ಕಾರ್ಯಕರ್ತರು ಈಗಾಗಲೇ ಬೆಳಗಾವಿ ತಲುಪಿದ್ದಾರೆ.

 ಈ ನೆಲೆಯಲ್ಲಿ ಹಾಸನ ಜಿಲ್ಲೆಯ ಕರವೇ ಕಾರ್ಯಕರ್ತರ ಕೂಡ ಬೆಳಗಾವಿಗೆ ಹೋಗಿದ್ದು ಮಹಾರಾಷ್ಟ್ರ ಸಚಿವರ ದುಂಡಾವರ್ತನೆ ವಿರುದ್ಧ ಸಮರಸಾರಿದ್ದಾರೆ.

 ಜಿಲ್ಲಾಧ್ಯಕ್ಷ ಮನು ಕುಮಾರ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ತಡ ರಾತ್ರಿಯ ಬೆಳಗಾವಿ ತಲುಪಿದ್ದು ಇಂದು ಬೃಹತ್ ಶಕ್ತಿ ಪ್ರದರ್ಶನ ನಡೆಸಲಿದ್ದಾರೆ.

 ಮಹಾರಾಷ್ಟ್ರ ಸಚಿವರು ಯಾವುದೇ ಕಾರಣಕ್ಕೂ ಕರ್ನಾಟಕಕ್ಕೆ ಕಾಲಿಡಲು ಬಿಡುವುದಿಲ್ಲ ಎಂದು ಕರವೇ ಜಿಲ್ಲಾ ಕಾರ್ಯದರ್ಶಿ ರಘು ಪಾಳ್ಯ ಎಚ್ಚರಿಕೆ ನೀಡಿದ್ದಾರೆ.

RELATED ARTICLES
- Advertisment -spot_img

Most Popular